ಬಾಲ್ಯ ವಿವಾಹ

मेरी ये कविता बाल विवाह पर है जिसमें बहुत छोटी उम्र में लड़कियों लड़को का विवाह कर दिया जाता है।इस कविता को मैंने कन्नड़ भाषा में लिखा है।

Originally published in kn
Reactions 1
433
Poonam chourey upadhyay
Poonam chourey upadhyay 06 Jan, 2021 | 1 min read
Father Child marriage Daughter

ನಾನು ಹುಟ್ಟಿದಾಗ, ಹೆಣ್ಣು ಮಗುವಿನ ಜನನ ಬೇಡ ಎನ್ನುತ್ತಿದ್ದಿರಿ, ವರದಕ್ಷಿಣೆ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ 

 

ನಾನು ಬೆಳೆಯುವ ವಯಸ್ಸಿನಲ್ಲಿ ಅಡುಗೆ ಕೆಲಸ ಮಾಡುತ್ತಿದೆ

 

ಮುಂದೆ ಒಂದು ದಿನ ಬೇರೆಯವರ ಮನೆಗೆ ಹೋಗುತ್ತೀಯಾ, ನೀನೇನು ಓದುವ ಅವಶ್ಯಕತೆ ಇಲ್ಲ..

 

ನಾನು ತುಂಬಾ ಅಳುತಿದ್ದೆ, ಓದಬೇಕು ಪುಸ್ತಕ ಕೊಡಿ ಅಂತ

 

ನನಗೆ ನನ್ನದೇ ಆದ ಆಸೆಗಳು ಇದೆ..

ನಾನು ನಿಮ್ಮ ಮಗಳು, ನಿಮಗೆ ಹೊರೆ ಅಲ್ಲ, ನನಗೂ ಸಹ ದೊಡ್ಡ ಕನಸುಗಳಿದೆ..

 

ನೀವೂ ವಿದ್ಯಾವಂತರಾಗಿ ಎಲ್ಲಾ ಗೊತ್ತಿದ್ದೂ ಹೀಗೆ ಹೇಳುತ್ತಿದರೆ ನನಗೆ ನೋವಾಗುತ್ತಿದೆ..

 

ನಾನು ಚಿಕ್ಕ ಹುಡುಗಿ, ಮದುವೆ ಎನ್ನೋ ದೊಡ್ಡ ಜವಾಬ್ದಾರಿ ಕೊಡಬೇಡಿ..

ನಿಮ್ಮ ಉದ್ಯಾನವನದ ಹಕ್ಕಿ ನಾನು, ನನ್ನ ಬಗ್ಗೆ ಕಾಳಜಿ ಇರಲಿ..

 

ನನಗೆ ನೆನಪಾಗುತ್ತೆ, ನೀವು ನಮ್ಮ ತಾಯಿಗೆ ಹೆಣ್ಣು ಮಗುವಿಗೆ ಜನನ ಕೊಟ್ಟೆ ಅಂತ, ಚಿತ್ರಹಿಂಸೆ ಕೊಡುತ್ತಾ ಇದ್ದಿರಿ 

 

ನಿಮ್ಮ ಮಗಳ ಬಗ್ಗೆ ನಿಮಗೆ ಪ್ರಾಮುಖ್ಯತೆ ಇರಬೇಕು, ನಾನು ಸಹ ಓದಿದ್ದರೆ, ಒಳ್ಳೆ ಕೆಲಸದಲ್ಲಿ ಇರುತ್ತಿದೆ ಈ ಸಮಾಜದಲ್ಲಿ

 

ಜನ ಯಾಕೆ ಯೋಚನೆ ಮಾಡುತ್ತಾರೆ ಬಾಲ್ಯ ವಿವಾಹ ಮಾಡಲೇಬೇಕು ಅಂತ..

ಜನ ಯಾಕೆ ಯೋಚನೆ ಮಾಡಲ್ಲ ಮಾಡಬಾರದು ಅಂತ

 

ನಾನು ಅವಾಗ ಹೇಳುತ್ತಿದ್ದೆ ಬಾಲ್ಯ ವಿವಾಹ ಬೇಡ ಅಂತ, ನಿಮಗೆ ಅರ್ಥ ಆಗುತ್ತಿರಲಿಲ್ಲ

 

ಇದು ಅಪರಾಧ ನೀವು ಮಾಡಬಾರದು..

1 likes

Published By

Poonam chourey upadhyay

poonamchoureyupadhyay

Comments

Appreciate the author by telling what you feel about the post 💓

Please Login or Create a free account to comment.