ಕೊನೆಗೆ...

ಅವಳು ಮೊದಲು ಹೋಗಿದ್ದು ಎಲ್ಲಿಗೆ? ಆಮೇಲೆ ಭೇಟಿ ಮಾಡಿದ್ದು ಯಾರನ್ನು?

Originally published in kn
Reactions 2
445
Ajit Harishi
Ajit Harishi 13 Aug, 2020 | 1 min read

ಕೊನೆಗೆ

------ ------ 


ಹತ್ತಿರ ಬನ್ನಿ

ಕೈ ಮೇಲೆತ್ತಿ

ಇಷ್ಟು ಸಾಕಾ ...

ಟೈಟಾಗುತ್ತೇನೋ... 

ಸ್ವಲ್ಪ?...ಹೂಂ, 

ತೀರಾ ಲೂಸಾಯ್ತಾ... 

ಇನ್ನೂ ಬೇಕಾ?

ಇತ್ತ ಜರುಗಿ

ಉಬ್ಬಿಸಿ ನಿಲ್ಲಿ

ಈ‌ ಕಡೆ ತಿರುಗಿ

ಸೊಂಟ... 

ಸಾಕಿಷ್ಟು

ಮೂವತ್ತೆರಡು, ನಾಲ್ಕು, ಆರು..

ಅಂಕೆ ಮೂಡಿಸಿದರು

ಅಳೆದು ಬೇಕಾದಂತೆ..

ಕೇಳಿ ಕೇಳಿ ತಿಳಿದು...

ಕಳಿಸಿ ಬಾಗಿಲ ತೆರೆದು.


ನೀವು ಬೆಡ್ ಮೇಲೇರಿ 

ಸಡಿಲಿಸಿ ಸ್ವಲ್ಪ... 

ಹೊಕ್ಕಳ ಸುತ್ತ ಕೈ ಇಟ್ಟು

ಅಲ್ಲೆಲ್ಲಾ ತಟ್ಟಿ

ಎದೆಯ ಬಡಿತ ಆಲಿಸಿ

ಕೈಗೆ ಬಿಗಿದು

ಪುಸು ಪುಸು ಒತ್ತಿ 

ಹ್ಮಂ...

ಕಿವಿಯಿಂದ ಹೊರತೆಗೆದು

ಎದೆಯ ಮೇಲೆ ಇಳಿಬಿಟ್ಟು

ಗುಪ್ತಲಿಪಿಯಲಿ

ಅಕ್ಷರಗಳ ಗೀಚಿದರು..

ಮತ್ತೆ ಬರಬೇಕು ಹಗಲು

ರಾತ್ರಿಯ ಚೀಟಿಯ ಹಿಡಿದು 

ಮತ್ತದೇ ಬಾಗಿಲು ತಟ್ಟಲು...


ಕೊನೆಗೆ, 

ಮುಚ್ಚಿದ ಬಾಗಿಲು ತೆರೆದರು..!


**** 

- ಡಾ. ಅಜಿತ್ ಹರೀಶಿ

2 likes

Published By

Ajit Harishi

ajitharishi

Comments

Appreciate the author by telling what you feel about the post 💓

Please Login or Create a free account to comment.