Titleನೆಂಟ

a friend in need is a friend in deed

Originally published in kn
Reactions 0
370
rathnanagaraja
rathnanagaraja 30 Nov, 2020 | 1 min read
kannada


ಹಜಾರದ ಘಂಟೆ ನಾಲ್ಕು ಬಾರಿಸಿದ ಶಬ್ದಕ್ಕೆ ಎಚ್ಚರಗೊಂಡ ವಸುಧ, ಪತಿ ಶ್ರೀಧರನ ತೋಳಿನ ಸೆರೆಯಿಂದ ಬಿಡಿಸಿಕೊಂಡು ಎದ್ದಳು. ಅವಳು ಮುಖ ತೊಳೆದು ಬರುವಷ್ಟರಲ್ಲಿ ಶ್ರೀಧರನು ಎದ್ದು ಬಚ್ಚಲಮನೆಗೆ ಹೋಗಿ ಮುಖ ತೊಳೆದು ಕೊಂಡು ಬಂದು ಅಡುಗೆ ಮನೆಯಲ್ಲಿ ಇಣುಕಿ ನೋಡಿದ. ವಸುಧ ಕಾಫಿ ಮಾಡುವುದರಲ್ಲಿ ತಲ್ಲನಳಾಗಿದ್ದಳು."ವಸು ಕಫಿ ಆಯಿತೇ "? ಎನ್ನುತ ಅಡುಗೆ ಮನೆಯೊಳಗೆ ಬಂದು ಅಲ್ಲಿಯೇ ಇದ್ದ ಸ್ಟೂಲ್ ಎಳೆದು ಕೊಂಡು ಕುಳಿತ. ಆತನ ಕೈಯಿಗೆ ಒಂದು ಕಾಫಿ ಕಪ್ ನೀಡಿ ತಾನೊಂದನ್ನು ಹಿಡಿದು ಹಾಲ್ ಕಡೆ ನಡೆದಳು. ಶೀಧರನು ಸಹ ಅವಳನ್ನು ಹಿಂಬಾಲಿಸಿ ಬಂದ. ಇಬ್ಬರು ಟಿವಿ ನೋಡುತ್ತಾ ಕಾಫಿ ಕುಡಿದರು. ಟಿವಿಯಲ್ಲಿ ಯಾವುದೇ ಆಸಕ್ತಿ ಇರುವ ಕಾರ್ಯಕ್ರಮ ಇರಲಿಲ್ಲವಾದುದರಿಂದ ಸ್ವಿಚ್ ಅಫ್ ಮಾಡಿ ಕಾಲಿ ಕಾಫಿ ಕಪ್ಪುಗಳನ್ನು ಎತ್ತಿಕೊಂಡು "ಸಂಜೆ ಎನು ತಿಂಡಿ ಮಡಲಿ " ? ಎಂದಳು

" ಯಾಕೊ ಎನು ತಿನ್ನಬೇಕೆನಿಸುತ್ತಿಲ್ಲ ಕಣೆ " ಎಂದ

"ಹಾಗದರೆ ರಾತ್ರಿ ಎನು ಅಡುಗೆ ಮಾಡಲಿ ? " ವಸುಧ

" ತಿಳಿ ಸಾರು ಅನ್ನದ ಜೊತೆಗೆ ಸಂಡಿಗೆ ಕರಿದು ಬಿಡು " ಶ್ರೀಧರ

ವಸುಧ ಅಡುಗೆ ಮನೆಯೊಳಗೆ ಹೋದಳು. "ವಸು, ನಾನು ಮಹಡಿ ಮೇಲೆ ಇರುತ್ತೇನೆಂದು ಹೇಳುತ್ತ ಮುಂಬಾಗಿಲು ಎಳೆದು ಮುಚ್ಚಿ ಹೊರಟ. ವಸುಧ ಕಾಫಿ ಪಾತ್ರೆಗಳನ್ನು ಗಲಬರಿಸುತ್ತಿದ್ದಳು. ಆಗ ಕಾಲಿಂಗೆ ಬೆಲ್ ಭಾರಿಸಿತು. ವಸುಧ ಕೈ ಒರೆಸುತ್ತ ಕುತೂಹಲದಿಂದ ಬಂದು ಬಾಗಿಲು ತೆರೆದಳು. ಎದುರಿಗೆ ನಿಂತಿದ್ದ ಪಕ್ಕದ ಮನೆಯಾಕೆಯನ್ನು ಕಂಡು ಕಸಿವಿಸಿಯಾಯಿತು. ಆಕೆ ನೋವಿನಿಂದ "ದಯವಿಟ್ಟು ನನ್ನ ಆಸ್ಪತ್ರ್ರೆಗೆ ಕರೆದು ಕೊಂಡು ಹೋಗಿ ಅಮ್ಮ " ಎಂದು ದಯನೀಯವಾಗಿ ಬಿಕ್ಕಿದಳು. ತುಂಬಿದ ಬಸುರಿ ಎನು ಮಾತನಾಡಬೇಕೆಂದು ತೊಚದೆ ವಸುಧ ಕ್ಷಣ ಸುಮ್ಮನಿದ್ದು ಬಿಟ್ಟಳು. ನಂತರ ಎಚ್ಚೆತ್ತು ಕೊಂಡು "ಬನ್ನಿ ! ಒಳಗೆ ಬನ್ನಿ " ಎಂದು ಮನೆಯೊಳಗೆ ಆಹ್ವಾನಿಸುತ್ತ ತಾನೇ ಆಕೆಯನ್ನು ಕೈ ಹಿಡಿದು ಕರೆ ತಂದಳು. ಆಕೆ ಕೂರಲು ಸಿದ್ದಳಿರಲಿಲ್ಲ. ಪ್ಲೀಸ್ ವಸುಧ ನನ್ನ ಈಗಲೇ ಆಸುಪತ್ರೆಗೆ ಕರೆದು ಕೊಂಡು ಹೋಗಿ, ಆಯೋ ಅಮ್ಮ ! ನನ್ನ ಕೈಯಲ್ಲಿ ತೆಡೆಯುವುದಕ್ಕೆ ಆಗುತ್ತಿಲ್ಲ " ಎಂದು ಚೀರಾಡಿದಳು. ಇವರಿಬ್ಬರ ಮಾತುಗಳನ್ನು ಮೇಲಿನಿಂದ ಆಲಿಸುತ್ತಿದ್ದ ಶ್ರೀಧರ ಗೊಂದಲದಿಂದ ಇಬ್ಬರ ಮುಖಗಳನ್ನು ಬದಲು ನೋಡುತ್ತಿದ್ದ. ಆಕೆಯ ಪರಿಸ್ಥಿತಿಯನ್ನು ಅರಿತ ವಸುಧ ಶ್ರೀಧರನತ್ತ ಏನು ಮಾಡುವುದೆಂಬ ನೋಟ ಬೀರಿದಳು. ವಸುಧಳ ಗೊಂದಲವನ್ನು ಅರಿತವನಂತೆ ಸರಸರನೇ ಮಹಿಡಿ ಇಳಿದು ಬಂದು " ನಮಗೆ ಜಾಗ ಹೊಸದು. ಆಸ್ಪತ್ರೆ ಎಲ್ಲಿದೆ ಎಂದು ನಮಗೆ ಗೊತ್ತಿಲ್ಲ. ನೀವೇ ದಾರಿ ತೊರಿಸ ಬೇಕು ನಾವು ಕರೆದು ಕೊಂಡು ಹೋಗುತ್ತೇª.É ನಿಮ್ಮ ಮನೆಯವರು ಎಲ್ಲಿ ? " ಎಂದ

"ಅವರು ಮಾರ್ಕೇಂಟಿಗ್ ಕೆಲಸ ಮಾಡುತ್ತಾರೆ. ಊರೂರು ಸುತ್ತುತ್ತಿರುತ್ತಾg.É ಅವರು ಇರುತ್ತೇನೆಂದರು. ಹೆರಿಗೆಗೆ ಇನ್ನು ಸಮಯವಿದೆ ಎಂದು ನಾನೇ ಅವರನ್ನು ಕಳುಹಿಸಿದೆ. ಅವರಿಗು ಅಮ್ಮನಿಗು ಫೋನ್ ಮಾಡಿದ್ದೇನೆ. ಅವರು ಬರುತ್ತಾರೆ. ಅಮ್ಮ ಶಿವಮೊಗ್ಗದಿಂದ ಹೊರಟ್ಟಿದ್ದಾರೆ. ಅವರು ಬರುವವರೆಗೂ ನನ್ನ ಕೈಯಲ್ಲಿ ತಡೆಯುವುದಕ್ಕೆ ಆಗುತ್ತಿಲ್ಲ. ಆಯೋ ಅಮ್ಮ !ನನ್ನ ಕೈಯಲ್ಲಿ ಆಗುತ್ತಿಲ್ಲ "ಎಂದು ಹೊಟ್ಟೆ ಮೇಲೆ ಕೈ ಇಟ್ಟು ಕೊಂಡಳು. ಅವಳ ದೇಹವೀಡಿ ನಡುಗುತ್ತಿತು. ಧಾರಕಾರವಾಗಿ ಸುರಿಯುತ್ತಿದ್ದ ಬೆವರಿನಿಂದ ಅವಳ ಉಡಿಗೆಯಲ್ಲ ಒದ್ದೆಯಾಗಿತ್ತು. ವಸು ! ನೀನು ಸಹ ಹೊರಡು. ಆಕೆಯ ಮನೆಯ ಬೀಗ ಹಾಕು ಗೇಟಿನ ಆಚೆ ನಿಂತ್ತಿರು ನಾನು ಆಟೋ ತರುತ್ತೇನೆ " ಎಂದು ರೂಮೊಳಗೆ ಹೋಗಿ ಶರ್ಟು ಪ್ಯಾಂಟು ತೊಟ್ಟು ಓಡು ನಡೆಗೆಯಲ್ಲಿ ಹೊರಗೆ ಹೊರಟ. ವಸುಧ ಆಕೆಯನ್ನು ಆಗೊ ಈಗೊ ಸಮಧಾನಿಸಿ ಸೋಫದಲ್ಲಿ ಕೂರಿಸಿ ಕಾಫಿ ಕುಡಿಸಿದಳು. "ಹೆರಿಗೆಗೆ ಬೇಕಗುವ ಬಟ್ಟೆಗಳನ್ನು ಹೊಂದಿಸಿ ಕೊಂಡಿದ್ದೀರಾ ? ಅದು ಎಲ್ಲಿದೆ ಹೇಳಿ ? ನಾನು ತರುತ್ತೇನೆಂದು ಮನೆ ಕೀ ಪಡೆದು ಅವರ ಮನೆಗೆ ಹೋಗಿ ಅದನ್ನು ಎಲ್ಲಾ ಎತ್ತಿ ಕೊಂಡು ಬಂದಳು. ದುಡ್ಡು ಬೇಕಿತ್ತೇ ? ಎಂದು ವಸುಧ ಕೇಳಿದಕ್ಕೆ , ಆಕೆ ಬೇಡವೆಂದು ತಲೆ ಆಡಿಸಿದಳು. ವಸುಧಳ ಕೈ ಹಿಡಿದು ಕ್ಷಮಿಸಿ ! ಎಂದು ಕ್ಷಮೆ ಕೊರಿದಳು.

" ಛೇ ! ಎನಿದಲ್ಲ ಕೈ ಬಿಡಿ. ಈಗ ಅದಕ್ಕೆ ಸಮಯವಲ್ಲ , ಮೊದಲು ಹೆರಿಗೆ ಆಗಲಿ ಆಮೇಲೆ ಮಾತನಾಡಬಹುದು " ಎಂದು ಹೇಳುತ್ತಿದ್ದ ಹಾಗೆ ಮನೆ ಮುಂದೆ ಆಟೋ ಬಂದು ನಿಂತ ಶಬ್ದ ಕೇಳಿಸಿತು. ತಡಬಡಿಸಿ ಮೂವ್ವರು ಆಟೋ ಹತ್ತಿದ್ದರು. ಆಕೆ ಅಳುತ್ತಲೇ ಆಸ್ಪತ್ರೆ ದಾರಿ ಹೇಳುತ್ತಿದ್ದಳು. ಮೊದಲೇ ಫೊನ್ ಮಾಡಿದ್ದ ಕಾರಣ ಆಸ್ಪತ್ರೆಯವರು ಸ್ಟ್ರಚರ್‍ನೊಂದಿಗೆ ಕಾಯುತ್ತಿದ್ದರು. ವಸುಧ ಆಕೆಯನ್ನು ಆಟೋದಿಂದ ಮೆಲ್ಲಗೆ ಇಳಿಸಿ ಕೈ ಹಿಡಿದು ಸ್ಟ್ರಚರ್ ಬಳಿ ಕರೆದೊಯ್ದಿದಳು. ಆಸ್ಪತ್ರೆಯವರ ಸಹಾಯದೊಂದಿಗೆ ಸ್ಟ್ರೆಚರ್ ಹತ್ತಿದರು ಆಕೆ. ಆಟೋದವರಿಗೆ ಹಣ ಕೊಟ್ಟು ಶ್ರೀಧರದನು ಸಹ ಅವರ ಜೊತೆಗೂಡಿದ. ತಪಾಸಣೆಗೆ ಒಳಗೆ ಹೋದರು. ಶ್ರೀಧರ್ ತಪಾಸಣೆ ಮುಗಿದು ಹೆರಿಗೆ ವಾರ್ಡಗೆ ಹೋಗುವವರೆಗೆ ಶ್ರೀಧರ ಅತ್ತಿಂದ ಇತ್ತ ಇತ್ತಿಂದ ಆತ್ತ ಚಡಪಡೆಕೆಯಲ್ಲಿ ನಡೆದಾಡುತ್ತಿದದು ಮತ್ತು ವಸುಧ ಅತಂಕದಲ್ಲಿ ಪದೆ ಪದೆ ತುಸುವೆ ಕಾಣುತ್ತಿದ್ದ ಗಾಜಿನ ಕಿಟಿಕೆಯಲ್ಲಿ ಒಳಗೆ ವಿದ್ಯಾಮಾನಗಳನ್ನು ಗಮನಿಸುತ್ತಿದ್ದನ್ನು ಆಕೆಯೂ ಸಹ ಪದೇ ಪದೇ ನೋಡುತ್ತಿದರು. ತಪಾಸಣೆ ಮುಗಿದು ಆಕೆಯನ್ನು ಹೆರಿಗೆ ವಾರ್ಡ್‍ಗೆ ಕರೆದೊಯುವಾಗ ಶ್ರೀಧರ್ ಮತ್ತು ವಸುಧ ಆಕೆಯ ಬಳಿ ದಾವಿಸಿದರು. ಆಕೆ ಅವರಿಬ್ಬರ ಕೈಹಿಡಿದು ಕೊಂಡು "ಕ್ಷಮಿಸಿ" ಎಂದು ದೀನಾ ಸ್ವರದಲ್ಲಿ ಹೇಳಿದಳು. ಶ್ರೀಧರ್ ಅದಕ್ಕೆ ಪ್ರತಿಯಾಗಿ ತಲೆ ಸವರಿ " ನನ್ನ ಅಕ್ಕನೊ ತಂಗಿನೊ ಆಗಿದಿದ್ದರೆ ಈದನ್ನೇ ಮಾಡಿತ್ತಿರಲಿಲ್ಲವೇ ? ಮಗ ಬರಲಿ ಆಮೇಲೆ ಬಡ್ಡಿ ಸಮೇತ ಕ್ಷಮಿಸುತ್ತೇನೆ " ಎಂದರು. ವಸುಧ ಆಕೆಯ ಬೆನ್ನು ಸವರಿ ಸಾಂತ್ವಾನಿಸುತ್ತಿದ್ದರು. ಅಷ್ಟರಲ್ಲಿ ಡಾಕ್ಟರ್ ಎಚ್ಚರಿಸಿದ ಕೊಡಲೇ ವಾರ್ಡ್ ಬಾಯಿ ಸ್ಟ್ರೆಚರ್ ತಳ್ಳಿ ಕೊಂಡು ಹೋದ. ಶ್ರೀಧರ್ ಮತ್ತು ವಸುಧ ವಿಸಿಟರ್ಸ್ ಜಾಗಕ್ಕೆ ಬಂದು ಕುಳಿತರು. "ಪಾಪ ಆಕೆ ಅಲ್ವ ?" ಎಂದಳು. 

" ನಿನ್ನ ಅರ್ಥ ಮಾಡಿ ಕೊಳ್ಳುವುದು ಕಷ್ಟ ಕಣೆ. ಅವತ್ತು ಒಡೆದಾಡುವ ರೀತಿ ಜಗಳವಾಡಿದೆ, ನಿನ್ನ ಜೊತೆ ನನ್ನನು ಸಹ ಬಾಗಿಯಾಗಿಸಿದೆ " ಶ್ರೀಧರ್

" ಮತ್ತೆ ಆಕೆ ನಾಯಿ ಎಳದು ತಂದು ಹಾಕಿದ ಚಿಂದಿ ಬಟ್ಟೆಯನ್ನು ನಾವೇ ಹಾಕಿದ್ದು ಎಂದು, ನÀಮ್ಮನೆ ಗಿಡದ ಎಲೆಗಳು ಗಾಳಿಗೆ ಹಾರಿ ಅವರ ಮನೆ ಕಾಂಪೊಂಡಿನಲ್ಲಿ ಬಿದ್ದರೆ ನನ್ನನು ಬಂದು ಕಸ ಗುಡಿಸು ಎಂದು ಬಾಯಿ ಮಾಡಿದರೆ ಹೇಗೆ ಹೇಳಿ ? ನಾನು ಆಗತಾನೆ ಕೆಲಸದಿಂದ ಬಂದು ಸುಸ್ತಾಗಿ ಉಸಪ್ಪ ಎಂದು ಸುಧಾರಿಸಿ ಕೊಳ್ಳುತ್ತಿದರೇ ಆಕೆ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿದುದನ್ನು ನೀವು ನೋಡುತ್ತಿರಲಿಲ್ಲವೇ. ನಾನು ಅವರ ಮನೆ ಕಸ ಗುಡಿಸಲು ಸಾಧ್ಯವೇ ?" ವಸುಧ

" ಅದಕ್ಕೆ ನೋಡು ಹೆಣ್ಣು ಕ್ಷಮಯ ಧರಿತ್ರಿ ಅನ್ನುವುದು. ನಾವುಗಳು ಉದ್ಯೋಗಸ್ಥರು ಜನರ ನಡುವೆ ಬೆರೆಯುತ್ತೇವೆ. ಆಕೆ ಹೌಸ್ ವೈಫ್. ದಿನ ನಾವಿಬ್ಬರು ಕೆಲಸಕ್ಕೆ, ಮಾರ್ಕೇಟ್ಗೆ ದೇವಸ್ಥಾನಕ್ಕೆ ಒಟ್ಟೋಟಿಗೆ ಓಡಾಡುತ್ತಿದ್ದು ನೋಡಿ ಆಕೆÉ ಒಂದು ವಿಧವಾದ ಇನ್‍ಫಿರಿಯಾರಿಟಿ ಬೆಳಸಿ ಕೊಂಡಿದ್ದಾಳೆ. ಈಗ ನೋಡು ಪಶ್ಚತಾಪ ಪಡುತ್ತಿದ್ದಾಳೆ " ಶ್ರೀಧರ್

ಅಷ್ಟರಲ್ಲಿ ಅಲ್ಲಿಗೆ ಅತಂಕದಲ್ಲಿದ್ದ ಆಕೆಯ ಪತಿ ಬಂದು " ಶ್ರೀಧರ್‍ರವರೇ, ಅಪತ್ಕಾಲದಲ್ಲಿ ಆದವನೇ ನೆಂಟ ನಮ್ಮನ್ನು ಕ್ಷಮಿಸಿ, ಐ ಆಮ್ ಸಾರಿ, ಥ್ಯಾಂಕು ಸೊಮಚ್ " ಎಂದರು. 

" ಇರಲಿ ಬಿಡಿ, ಮೊದಲು ಆಕೆಯನ್ನು ನೋಡಿ ಹೋಗಿ " ಎಂದು ಹುರಿದುಂಬಿಸಿದರು. 




    

0 likes

Published By

rathnanagaraja

rathnanagaraja

Comments

Appreciate the author by telling what you feel about the post 💓

Please Login or Create a free account to comment.