Title

Poem based on Dr. Abdul Kalam

Originally published in kn
Reactions 0
288
rathnanagaraja
rathnanagaraja 15 Oct, 2020 | 1 min read
kannada

ಕಲಾಂ



ಕಲಾಂ

ಕುಲದಲ್ಲಿ ಕುರಾನವಾದರೆ

ಮನದಲ್ಲಿ ಶ್ರೀಮದ್ಬಾಗವತೆ

ಹಿಂದು ಮುಸಲ್ಮಾನ 

ಭಾಯ್ ಭಾಯ್ 

ಭಾವೈಕತೆ ಸಂಕೇತಿಗ 

ಕಲಾಂ ಇಗೊ ನಿಮಗೊಂದು ನನ್ನ ಸಲಾಂ 


ಬಯಸಲಿಲ್ಲ ಕುರ್ಚಿ

ಕೋರಲಿಲ್ಲ ಕೋಟಿ ಕೋಟಿ

ಬಯಸಿದ್ದು ವಿದ್ಯೆ

ದಕ್ಕಿದ್ದು ರಾಷ್ಟ್ರ ಪದವಿ ಮಾನ್ಯತೆ

ಸ್ವಚ್ಛ ಚರಿತ್ರ ಬ್ರಹ್ಮಚಾರಿ ಅಬ್ದುಲ್

ಕಲಾಂ ಇಗೊ ನಿಮಗೊಂದು ನನ್ನ ಸಲಾಂ 


ಬಡತನ ಕಾಡಲಿಲ್ಲ 

ಬಾಹ್ಯಕಾಶಕ್ಕೆ ಹಾರಲು 

ಏರಿದೆ ಏರಿದೆ ಆಕಾಶಕ್ಕೇತರ

ಕಾಡಲಿಲ್ಲ ನಿಮ್ಮ ಮತ ಮದ ಮತ್ಸರ 

ಯಾರಿಗೂ ಇಲ್ಲ ನಿಮ್ಮ ಬಗ್ಗೆ ತತ್ಸರ

ಉತ್ಸಾಹಿ ಯುವಕ 

ಯುವ ಜನರ ಉಪಾಸಿ 

ಕಲಾಂ ಇಗೊ ನಿಮಗೊಂದು ನನ್ನ ಸಲಾಂ  

ನಿಮ್ಮ ನಿಶ್‍ಕಳಂಕ ಚಹರೆ

ಭಯೋತ್ಪದಕರಿಗೆ ಭೀತಿ

ಅದಕ್ಕೆ ನಿಮ್ ಮುಟ್ಟಲಿಲ್ಲ ನೆತ್ತರು

ಸ್ವಚ್ಚಂದ ಬಾನಂಗಳದ ಹಕ್ಕಿ

ನಿಮ್ಮಗಿಲ್ಲ ಯಾವ ಪಹರೆ

ರಾಜಕೀಯ ರಣರಂಗದಲ್ಲಿ 

ಅರಾಜಕೀಯ ಸೊಂಕಲಿಲ್ಲ

ಭಾರತದ ಮೊದಲ ಪ್ರಜೆ

ನಿವಾಗಿ ರಾರಾಜಿಸಿದ ಅಬ್ದುಲ್ 

ಕಲಾಂ ಇಗೊ ನಿಮಗೊಂದು ನನ್ನ ಸಲಾಂ 


ಗುಲಗಂಜಿ ತೂಕ

ಗುಣ ಸಂಪನ್ನ

ಭಾರತದ ತೆಕ್ಕೆಗೆ 

ಗುರುವಾದೆ ಚಿನ್ನರ ಚಿನ್ನಣ್ಣ

ಗುರುತರ ಆಕರ್ಷಣೆಯ 

ಜ್ಞಾನಿ ವಿಜ್ಞಾನಿ ಅಬ್ದುಲ್ 

ಕಲಾಂ ಇಗೊ ನಿಮಗೊಂದು ನನ್ನ ಸಲಾಂ





















0 likes

Published By

rathnanagaraja

rathnanagaraja

Comments

Appreciate the author by telling what you feel about the post 💓

Please Login or Create a free account to comment.