ನಮಗೇಕೆ ಬೇಕು ರಾಮ 🏹

ರಾಮನು ನಮಗೇಕೆ ಬೇಕು ಎಂಬುದರ ಪ್ರಸ್ತುತತೆ. ಕುರಿತು...

Originally published in kn
Reactions 4
763
Raksha Ramesh
Raksha Ramesh 12 Aug, 2020 | 1 min read
Ram

 

ನಮ್ಮೆಲ್ಲರ ನಂಬಿಕೆ, ವಿಶ್ವಾಸಗಳ ಮೂರ್ತಿವೆತ್ತ ಪ್ರತಿರೂಪವೇ ಶ್ರೀ ರಾಮ. ಇಂದು ನಾವು ತಾಯಿ ತಂದೆಯರ ಅವಹೇಳನ ಮಾಡುವ, ಆಸ್ತಿಗಾಗಿ ಒಡಹುಟ್ಟಿದವರೊಡನೆ ಕಿತ್ತಾಡುವ, ಕಾರಣವೇ ಇಲ್ಲದೇ,ಸಾಮರಸ್ಯದ ನೆಪವೊಡ್ಡಿ 2-3 ವಿವಾಹವಾಗುವ ಜನರನ್ನೇ ನೋಡುತ್ತಿರುವಾಗ, ಮಾತಾ-ಪಿತೃವಾಕ್ಯಪರಿಪಾಲಕ, ಮರ್ಯಾದಾ ಪುರುಷೋತ್ತಮ, ಪರನಾರೀಸಹೋದರನಾದ ಶ್ರೀರಾಮಚಂದ್ರನೇ ಧರ್ಮವೆಂದು ಭಾವಿಸುವುದು ಅತಿಶಯವೆನಿಸದು.

 

ರಾಮನು ಇತರರಂತೆ ಹೀಗೆ ಮಾಡಿ, ಹಾಗೆ ಮಾಡಿ, ಎಂಬ ಯಾವ ಉಪದೇಶವನ್ನಾಗಲೀ, ನೀತಿಬೋಧೆಯಾಗಲೀ ಮಾಡಲಿಲ್ಲ. ಬದಲಿಗೆ ಮಾದರಿಯಾಗಿ ಬದುಕು ನಡೆಸಿ ತೋರಿಸಿದ.ಅದಕ್ಕೇ ತ್ಯಾಗರಾಜರು ಹೇಳಿರುವುದು "ಧರನಿವಿಯೊಕ ಪರ್ಯಾಯಮು", ಅಂದರೇ ಧರ್ಮವೇ ಮೂರ್ತಿವೆತ್ತಂತಹ ಶ್ರೀರಾಮನನ್ನು ನಾನು ಆರಾಧಿಸುತ್ತೇನೆ ಎಂದು.

 

ಕೆಲವರು ಸೀತಾಪರಿತ್ಯಾಗವನ್ನೇ ವಿಷಯವಾಗಿಟ್ಟುಕೊಂಡು ರಾಮನನ್ನು ಅವಹೇಳನ ಮಾಡುತ್ತಾರೆ. ಅದು ರಾಮನು ರಾಜಾರಾಮನಾಗಿ ರಾಜಧರ್ಮ ಪಾಲಿಸಿದ ಪರಿ. ಇದನ್ನು ಅರ್ಥ ಮಾಡಿಕೊಳ್ಳಲು ವಿಫಲವಾದವರು ವಿತಂಡ ವಾದಗಳನ್ನು ಮುಂದುವರಿಸುತ್ತಲೇ ಇರುತ್ತಾರೆ.

 

ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸೂ, ರಾಮರಾಜ್ಯದ ಕನಸೇ ಆಗಿತ್ತು ಎಂಬುದನ್ನು ನಾವಿಲ್ಲಿ ಮರೆಯಬಾರದು. ಕೇವಲ ರಾಮನ ನಾಮಬಲದಿಂದಲೇ ಅಕ್ಷರ ಜ್ಞಾನ ಇಲ್ಲದ ಕಟುಕನೊಬ್ಬ ಮಹಾಕಾವ್ಯ ರಚಿಸುವಂತಹ ಪ್ರಾಜ್ಞನಾದ ಎಂದರೆ, ಇನ್ನು ನಾವು ನಿಜವಾಗಿಯೂ ಅವನ ಗುಣಗಳನ್ನು ಪರಿಪಾಠ ಮಾಡಿಕೊಂಡರೆ ಯಾವ ಮಟ್ಟಕ್ಕೆ ಬೆಳೆಯಬಹುದು ಊಹಿಸಿ!

 

ರಾಮ ಪರಿಪಾಲಿಸಿ, ಬದುಕಿ ತೋರಿಸಿದ ರೀತಿಯಲ್ಲಿ ನಾವು ಶೇಕಡಾ 1ರಷ್ಟು ಅಳವಡಿಸಿಕೊಂಡರೂ ಸಾಕು, ಜೀವನದಲ್ಲಿ ಅತ್ಯಂತ ಯಶಸ್ಸನ್ನು, ಸಾರ್ಥಕತೆಯನ್ನು ಕೊಂಡುಕೊಳ್ಳಬಹುದು.

 

ರಾಮನ ಗುಣಗಳಾದ ಪಿತೃವಾಕ್ಯ ಪರಿಪಾಲನೆ, ಸಹಭ್ರಾತೃತ್ವ, ಪರನಾರೀಸಹೋದರತ್ವ, ಪ್ರಜಾಸೇವಾ ಕರ್ತವ್ಯ, ಶೌರ್ಯ, ಏಕಪತ್ನೀವ್ರತ,  ಗುರುಸೇವಾ ಪಾಲನೆ, ದುಷ್ಟ-ಶಿಕ್ಷೆ, ಶಿಷ್ಟ-ರಕ್ಷೆ, ಶರಣಾಗತ ರಕ್ಷಣೆ, ಸ್ತ್ರೀಯರನ್ನು ಗೌರವಿಸುವ ಗುಣ, ಗುರಿ ಸಾಧಿಸುವ ಪರಿ  ಇವೆಲ್ಲವೂ ಇಂದಿಗೂ ಆದರ್ಶಪ್ರಾಯವಾದವು, ಎಂದಿಗೂ ಸಲ್ಲುವಂತಹವು.

 

ಇಂತಹ ರಾಮನನ್ನು ದೇವರೆಂದು ಮಂದಿರ ಕಟ್ಟಿ ಪೂಜಿಸಿ, ಗೌರವಿಸಿ, ಅವನ ಗುಣ ಪರಿಪಾಲನೆಗೆ ಪ್ರಯತ್ನಿಸಿದಾಗ ನಾವು ಧನ್ಯರಾಗುತ್ತೇವೆ.

4 likes

Published By

Raksha Ramesh

raksha

Comments

Appreciate the author by telling what you feel about the post 💓

Please Login or Create a free account to comment.