ಮನಸ್ಸು - ಭಾವನೆ - ಸಂಬಂಧ!

ಮನಸ್ಸು - ಭಾವನೆ - ಸಂಬಂಧ!

Originally published in kn
Reactions 1
465
PAKASH DSOUZA
PAKASH DSOUZA 18 Aug, 2021 | 2 mins read

ಸಿಸಿಡಿ ದಣಿ ಸಿದ್ಧಾರ್ಥರವರ ದುರಂತ ಅಂತ್ಯ ಏಕೋ ಬಿಟ್ಟು ಬಿಡದೆ ಕಾಡುತಿದೆ. ಅವರು ಮಲೆನಾಡಿನವರು 

ಎಂದು ಮೊದಲಿನಿಂದಲೂ ಅವರ ಬಗ್ಗೆ ಒಂದು ಕುತೂಹಲ ಮತ್ತು ಹೆಮ್ಮೆ, ಬಹುಷ್ಯ ಕಾಫಿ ತೋಟದ

 ವಾತಾವರಣದಲ್ಲಿ ಬೆಳೆದಿರುವುದಕ್ಕೋ, ಹಾಗೆ ಅವರ ಹೆಸರು ಅನೇಕ ಬರಿ ಕೇಳಿರುವುದರಿಂದ ಅವರು 

ನಮ್ಮವರೆಂಬ ಭಾವನೆ. ನನಗೆ ಮಾತ್ರ ಅಲ್ಲ ಅವರ ಪಾರ್ಥಿವ ಶರೀರ ಹಾದು ಹೋಗುವ ಸಂದರ್ಭದಲ್ಲಿ 

ಕೊಟ್ಟಿಗೆಹಾರ ಪೇಟೆಯ ಜನ ಅಂಗಡಿಗಳನ್ನೂ ಮುಚ್ಚಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅವರ ಅಂತಿಮ ದರ್ಶನ ಪಡೆದದ್ದು ಮಲೆನಾಡಿನಲ್ಲಿ ಅವರಿಗಿರುವ ಜನಪ್ರಿಯತೆಗೆ ಸಾಕ್ಷಿ .ಅದೇನೇ ಇರಲಿ ಅವತ್ತು 

ಸುದ್ದಿ ಮಾಧ್ಯಮಗಳಲ್ಲಿ ಅವರ ಬಗ್ಗೆ ಸುದ್ದಿ ಬರುತ್ತಿರುವಾಗ ನನ್ನ ಮನಸ್ಸು ಹೇಳ್ತಾ ಇತ್ತು, ಅವರ ವಾಹನ ಚಾಲಕನಿಗೆ ಅವರ ಮನಸಿನ ತಳಮಳ ಅರ್ಥವಾಗಿದ್ದರೆ ಅವರು ಬದುಕುತಿದ್ದರೋ ಏನೋ ಎಂದು!

 

ನನ್ನ ಯೋಚನೆಯೇನೋ ಬಾಲಿಶವಾದದ್ದೇ ಆದರೆ ನಾವು ಇನ್ನೊಬ್ಬರ ಮನಸ್ಸನ್ನು ಅರಿಯಲು ಸಾಧ್ಯವಿಲ್ಲ 

ಅನ್ನೊದು ವಾಸ್ತವ ಸತ್ಯ ಕೂಡ. ಬಹಳ ಹಿಂದೆ ನಡೆದ ಒಂದು ಘಟನೆ ನೆನಪಿಗೆ ಬರುತ್ತೆ ನನಗೆ. ನಾನು 

ಅಗ ಬೆಂಗಳೂರಿನ ಹೊಸಕೋಟೆಯ ಹತ್ತಿರ ದೇವನಗೊಂತಿ ಯಲ್ಲಿ ಕೆಲಸ ಮಾಡ್ತಾ ಇದ್ದೆ. ಅಲ್ಲಿಗೆ 

ಒಬ್ಬರು ಭವಿಷ್ಯ ಹೇಳೋರು ಬಂದ್ರು. ನನಗೆ ಅದ್ರಲ್ಲಿ ನಂಬಿಕೆ ಇಲ್ಲ ಆದ್ರೂ ಒಂದು ಕುತೂಹಲ. ಅವ್ರು 

ಹೇಳಿದ್ರು ನೀನು ಜಾಸ್ತಿ ವರ್ಷ ಹೀಗೆ ಕೆಲಸ ಮಾಡಲ್ಲ, ನಿನ್ನದೇ ಆದ ಸ್ವಂತ ಉದ್ಯಮ ಮಾಡ್ತಿಯಾ ಅಂತ. ನಾನು ನಕ್ಕು ಬಿಟ್ಟಿದ್ದೆ. ಅವಾಗ ಹೇಳಿದ್ರು ನೀನು ಮನಸಲ್ಲಿ ಒಂದು ಹೂವನ್ನು ಯೋಚಿಸು. ನಾನು ಮೊದಲಿಗೆ ಮಲ್ಲಿಗೆ ಅಂತ ಯೋಚಿಸಿದೆ ನಂತ್ರ ಬದಲಾಯಿಸಿ ಗುಲಾಬಿ ಅಂದುಕೊಂಡೆ.  ಆಶ್ಚರ್ಯ ಏನಂದ್ರೆ ನೀನು ಮೊದಲು ಮಲ್ಲಿಗೆ ಯೋಚ್ನೆ ಮಾಡಿದೆ ಆಮೇಲೆ ಏಕೋ ಮನಸ್ಸು ಬದಲಾಯಿಸಿ ಗುಲಾಬಿ 

ಅನ್ಕೊಂಡಿದೀಯ ಎಂದು ಸರಿಯಾಗಿ ಹೇಳಿಬಿಟ್ಟರು. ಬಹುಶ್ಯ ತುಂಬಾ ಸಾಧನೆ ಮಾಡಬೇಕು ಮನುಷ್ಯನ ಮನಸ್ಸನ್ನು ಅರಿತುಕೊಳ್ಳಲು. ಕೇಳ್ದೆ ಇನ್ಯಾವಾಗ ನಮ್ಮ ಭೇಟಿ ಅಂತ, ಎಲ್ಲ ದೇವರ ಇಚ್ಛೆ ಅಂತ ಹೇಳಿ 

ಹೊರಟು ಹೋದ್ರು. ಕಳೆಯಿತು 20 ವರ್ಷ ಇನ್ನು ಆ ಭೇಟಿ ನಡೆದಿಲ್ಲ!

 

ಅದೇನೇ ಇರಲಿ ದೇವರು ನಮಗೆ ಆ ಶಕ್ತಿಯನ್ನು ಕೊಟ್ಟಿಲ್ಲ. ನಾವು ನಮ್ಮ ಅಚ್ಚು ಮೆಚ್ಚಿನವರ ಮನಸ್ಸನ್ನು

ಅವರ ಭಾವನೆಯನ್ನು ಎಷ್ಟು ಅರ್ಥ ಮಾಡಿಕೊಂಡರು ಅದು ಪರಿಪೂರ್ಣ ಅಲ್ಲ. ಇನ್ನೊಬ್ಬರ ಮನಸ್ಸನ್ನು 100 ಶೇಕಡಾ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಕೊನೆತನಕ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಯನ್ನು ಹಂಚಬೇಕು. ಯಾವ ಸಮಯದಲ್ಲಿ, ಯಾವ ರೂಪದಲ್ಲಿ ದೇವರು ಯಾರನ್ನು ಯಾವಾಗ 

ಕರೆದುಕೊಂಡು ಹೋಗುತ್ತಾರೋ ಆ ದೇವರೇ ಬಲ್ಲರು. ಒಂದು ಸಣ್ಣ ಕೋಪ, ಜಗಳ, ಅಪನಂಬಿಕೆ, ತಪ್ಪಾಗಿ ಅರ್ಥ್ಯೆಸಿಕೊಳ್ಳುವುದರಿಂದ ಒಂದು ಕುಟುಂಬವೇ ಸರ್ವನಾಶವಾಗಿಬಿಡಬಹುದು. ನಾವು ಎಷ್ಟೇ ಪರಿಪೂರ್ಣ 

ವ್ಯಕ್ತಿಯಾಗಲು ಪ್ರಯತ್ನ ಪಟ್ಟರು ಅದನ್ನು ಸಾದಿಸುವುದು ಸುಲಭಸಾಧ್ಯ ಖಂಡಿತಾ ಅಲ್ಲ. ಸತ್ತ ಮೇಲೇನೆ 

ಒಬ್ಬ ಕೆಟ್ಟ ವ್ಯಕ್ತಿ ಕೂಡ ಒಳ್ಳೆಯವ. ಶತ್ರುಗಳು ಕೂಡ ಸತ್ತ ವ್ಯಕ್ತಿಯನ್ನು ಹೊಗಳುತ್ತಾರೆ. ಇದು ಕಣ್ಣಿಗೆ 

ರಾಚುವ ಸತ್ಯ . ಆದರೆ ಸತ್ತ ಮೇಲೆ ಒಳ್ಳೆ ಮಾತು ಕೇಳಿ ಏನು ಪ್ರಯೋಜನ? ಬದುಕಿರುವಾಗಲೇ ಅನನ್ಯ ವ್ಯಕ್ತಿಯಾಗಿ ಬದುಕಿ ತೋರಿಸಬೇಕು.

 

ಜೀವನವೆಂಬುದು ಭಾವನೆಗಳ ಸಂಘರ್ಷ. ಮದುವೆಯ ಜೀವನಕ್ಕೆ ಕಾಲಿಡುವಾಗ ಪರಸ್ಪರ ಕೈ ಬಿಡುವುದಿಲ್ಲ 

ಎಂದು ಭಾಷೆ ಕೊಟ್ಟಿರುತ್ತೆವೆ. ಹಾಗೆ ನಮ್ಮ ಮನದ ಭಾವನೆಗಳನ್ನು ಮನಸಲಿಟ್ಟುಕೊಂಡು 

ಕೊರಗುವುದಕ್ಕಿಂತ ಹೇಳಿಕೊಂಡರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸದ್ಯ. ಮನಸ್ಸನ್ನು ಏಕಾಂಗಿ 

ಎಂದಿಗೂ ಮಾಡಬಾರದು. ಏಕಾಂಗಿ ಮನಸು ತುಂಬಾ ಅಪಾಯಕಾರಿ. ಮನಸ್ಸು ಸುಮ್ಮನಿದ್ದಾಗ 

ಸಂಗೀತವನ್ನಾದರೂ ಕೇಳಬೇಕು. ಮನಸಿನಿಂದ ಮೂಡುವ ಭಾವನೆಗಳೇ ಸಂಬಂಧವನ್ನು ಬೆಸೆಯುತ್ತದೆ ಎಂದು ನಾವು ಮರೆಯಬಾರದು. ಹಾಗಾಗಿ ನಮ್ಮವರನ್ನು ಅರಿತುಕೊಳ್ಳಲು ನಿರಂತರವಾಗಿ ನಾವು ಪ್ರಯತ್ನ ಪಡಬೇಕು. ನಮ್ಮ ಮಾತು ಇನ್ನೊಬರಿಗೆ ನೋವು ತರುತ್ತದೆಯಾದರೆ ಅದನ್ನು ಆಡದೇ ಇರುವುದೇ ಲೇಸು. ಆಕಸ್ಮಿಕ ಜಗಳಗಳಾದಾಗ ತಾಳ್ಮೆ ಕಳೆದುಕೊಳ್ಳಬಾರದು. ಕೋಪದ ಭರದಲ್ಲಿ ನಾವು ನಮ್ಮ ಮನಸಿನ 

ಹತೋಟಿಯನ್ನು ಕಳೆದುಕೊಂಡುಬಿಡುತ್ತೆವೆ. ಜಗತ್ತು ಸುಂದರ ಹಾಗೆ ನಮ್ಮ ಮನಸ್ಸು ಕೂಡ ಸುಂದರವಾಗಿರಬೇಕು!

 

 ಪ್ರಕಾಶ್ ಮಲೆಬೆಟ್ಟು 

1 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.