ಕೋವಿಡ್ ಲಸಿಕೆಗಳಲ್ಲಿ ನಿಮಗೆ ನಂಬಿಕೆ ಇದೆಯೇ ?

ಕೋವಿಡ್ ಲಸಿಕೆಗಳಲ್ಲಿ ನಿಮಗೆ ನಂಬಿಕೆ ಇದೆಯೇ ? ನಿನ್ನೆ ತನಕ ಯಾರಾದರೂ ಆ ಪ್ರಶ್ನೆ ನನ್ನಲ್ಲಿ ಕೇಳಿದಲ್ಲಿ ಬಹುಶ್ಯ ತಟ್ಟನೆ ಉತ್ತರ ಹೇಳಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು ನಾನು ನಂಬಿಕೆ ಇಲ್ಲ ಎನ್ನುವ ಉತ್ತರ ಕೊಡುವ ಹಾಗಿಲ್ಲ. ಇಂದು ಬೆಳಿಗ್ಗೆನೇ ಹೋಗಿ ಲಸಿಕೆ ಹಾಕಿಸಿಕೊಂಡು ಬಂದೆ. ಹಾಗಾಗಿ ಪರಿಪೂರ್ಣ ನಂಬಿಕೆ ಇದೆ ಎನ್ನುವ ಉತ್ತರ ನಾನೀಗ ಕೊಡಲೇಬೇಕು.

Originally published in kn
Reactions 0
276
PAKASH DSOUZA
PAKASH DSOUZA 19 Jan, 2021 | 1 min read
What is your faith in Covid vaccines?

ನಿನ್ನೆ ತನಕ ಯಾರಾದರೂ ನನ್ನಲ್ಲಿ ಈ ಪ್ರಶ್ನೆ  ಕೇಳಿದಲ್ಲಿ ಬಹುಶ್ಯ ತಟ್ಟನೆ ಉತ್ತರ ಹೇಳಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು ನಾನು ನಂಬಿಕೆ ಇಲ್ಲ ಎನ್ನುವ ಉತ್ತರ ಕೊಡುವ ಹಾಗಿಲ್ಲ. ಇಂದು ಬೆಳಿಗ್ಗೆನೇ ಹೋಗಿ ಲಸಿಕೆ ಹಾಕಿಸಿಕೊಂಡು ಬಂದೆ. ಹಾಗಾಗಿ ಪರಿಪೂರ್ಣ ನಂಬಿಕೆ ಇದೆ ಎನ್ನುವ ಉತ್ತರ ನಾನೀಗ ಕೊಡಲೇಬೇಕು.

ಹೌದು ಗೆಳೆಯರೇ ಜಗತ್ತು ಚಡಪಡಿಸುತ್ತಾ ಕಾಯುತಿದ್ದ ಸಮಯ ಕಡೆಗೂ ಬಂದೆ ಬಿಟ್ಟಿತು. ಜಗತ್ತಿನಾನ್ದ್ಯಂತ ಕೋವಿಡ್ -19 ಗೆ ಬೇರೆ ಬೇರೆ ಲಸಿಕೆಯನ್ನು ನೀಡಲಾಗುತ್ತಿದೆ. WHO ಇನ್ನು ಯಾವುದೇ ಲಸಿಕೆಯನ್ನು ಶೇಕಡಾ ನೂರಕ್ಕೆ ನೂರರಷ್ಟು ಪರಿಪೂರ್ಣ ಅಂತ ಅನುಮೋದನೆ ಕೊಟ್ಟಿಲ್ಲವಾದರೂ, ಯಾರು ಕೂಡ ಇನ್ನು ಕಾಯೋದಿಕ್ಕೆ ತಯಾರಿಲ್ಲ. ಒಂದು ಕಣ್ಣಿಗೆ ಕಾಣದ ವೈರಸ್ ಕಳೆದ ಒಂದು ವರುಷದಲ್ಲಿ ಎಲ್ಲರ ಬದುಕನ್ನು ಮೂರೂ ಬಟ್ಟೆ ಮಾಡಿಬಿಟ್ಟಿದೆ. ಜಗತ್ತು ಒಮ್ಮೆ ಈ ಮಹಾಮಾರಿಯಿಂದ ಬಿಡುಗಡೆ ಯಾದ್ರೆ ಸಾಕು ಎನ್ನುವ ಸ್ಥಿತಿಗೆ ಬಂದು ತಲುಪಿಬಿಟ್ಟಿದೆ. ಅನೇಕ ಸಂಶೋಧನೆಗಳ ನಂತರ ಕೆಲವು ಲಸಿಕೆಗಳು ಸಿದ್ಧವಾಗಿದೆ. ನಿಜಕ್ಕೂ ಜಗತ್ತಿನಾನ್ದ್ಯಂತ ಈ ಲಸಿಕೆಗಳನ್ನು ಕಂಡು ಹಿಡಿಯಲು ಶ್ರಮಪಟ್ಟ ವಿಜ್ಞಾನಿಗಳು , ಸಂಶೋಧಕರು, ಸಂಶೋಧನೆಗೆ ಒಳಪಡಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ದೇಹದೊಳಗೆ ಲಸಿಕೆ ಹಾಕಿಸಿಕೊಂಡ ಸ್ವಯಂ ಸೇವಕರು , ಪ್ರತ್ಯಕ್ಷ , ಪರೋಕ್ಷವಾಗಿ ಕೆಲಸ ಮಾಡಿದ ಪ್ರತಿಯೊಬ್ಬರೂ, ಆಯಾ ದೇಶದ ಸರ್ಕಾರಗಳು ಮತ್ತು ಅದರ ಮುಖ್ಯಸ್ಥರು ಎಲ್ಲರೂ ಅಭಿನಂದನೆಗೆ ಅರ್ಹರು . ಭಾರತ ಕೂಡ ಸ್ವದೇಶೀ ಲಸಿಕೆಯನ್ನು ಅಭಿವೃದಿಪಡಿಸಿರುವುದು ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆ. ಇನ್ನು ಈ ಲಸಿಕೆಗಳು ಎಷ್ಟರಮಟ್ಟಿಗೆ ಪರಿಣಾಮಕಾರಿ, ಏನಾದರೂ ಅಡ್ಡಪರಿಣಾಮಗಳಿದೆವೆಯೇ , ಜೀವಕ್ಕೇನು ಅಪಾಯವಿಲ್ಲ ತಾನೇ ! ಇದ್ಯಾವುದು ನಮಗೆ ಜನಸಾಮಾನ್ಯರಿಗೆ ಗೊತ್ತಿಲ್ಲ. ಜನಸಾಮಾನ್ಯರಾಗಿ ನಮ್ಮಲ್ಲಿ ಇರೋದು ನಮ್ಮ ಸರ್ಕಾರಗಳ ಮೇಲೆ , ಅದರ ಮುಖ್ಯಸ್ಥರ ಮೇಲೆ, ನಮ್ಮ ಲಸಿಕೆಗಳ ಮೇಲೆ ಕೇವಲ ಭರವಸೆ ಮತ್ತು ವಿಶ್ವಾಸ ಮಾತ್ರ.

ಮೊದಲಿಗೆ ನಾನು ಯುಎಇ ದೇಶದಲ್ಲಿ ಪ್ರಸ್ತುತ ಇರುವುದರಿಂದ ಇಲ್ಲಿನ ಅನುಭವವನ್ನು ಹಂಚಿಕೊಳ್ಳಲು ಬಯಸುತೇನೆ. ಇದೊಂದು ಪುಟ್ಟ ರಾಷ್ಟ್ರವಾದುದರಿಂದ ಇಲ್ಲಿ ಯಾವುದೇ ಲಸಿಕೆ ತಯಾರು ಮಾಡುವ ಕೆಲಸ ನೆಡೆದಿಲ್ಲ. ಆದರೆ ಸಿನೋಫಾರ್ಮ್ ಎನ್ನುವ ಚೀನಾ ಲಸಿಕೆ ಮತ್ತು ಫೈಝರ್ ಬಯೋಟೆಕ್ ಎನ್ನುವ ಅಮೇರಿಕಾದ ಲಸಿಕೆಗೆ ಇಲ್ಲಿ ಅನುಮೋದನೆ ದೊರೆತಿದೆ. ಇದರಲ್ಲಿ ಸಿನೋಫಾರ್ಮ್ ಶೇಕಡಾ 86 ರಷ್ಟು ಮತ್ತು ಫಿಜರ್ 90 % ಪರಿಣಾಮಕಾರಿ ಎನ್ನುವುದನ್ನು 3 ನೇ ಹಂತದ ಪರೀಕ್ಷೆ ನಡೆಸಿ , ಸಾಬೀತುಗೊಂಡ ಮೇಲೆ ಅನುಮೋದನೆ ಕೊಟ್ಟಿದ್ದಾರೆ.ಅನುಮತಿ ಮಾತ್ರವಲ್ಲ , ಲಸಿಕೆಯನ್ನು ತರಿಸಿಕೊಂಡು ಈಗಾಗಲೇ ಕೊಡಲು ಸುರು ಮಾಡಿದ್ದಾರೆ. ಮೊದಲಿಗೆ ಇಲ್ಲಿಯ ಪ್ರದಾನ ಮಂತ್ರಿಗಳೇ ಲಸಿಕೆ ಚುಚ್ಚಿಸಿಕೊಂಡು ಜನರಲ್ಲಿ ಆತ್ಮವಿಶ್ವಾಸ ತುಂಬಿಸುವ ಕೆಲಸ ಮಾಡಿದರು. ಜನರಿಗೆ ಸೂಕ್ತ ಮಾಹಿತಿ ಒದಗಿಸಿ ಲಸಿಕೆ ಹಾಕಿಸುಕೊಳ್ಳುವಂತೆ ಪ್ರೇರೇಪಿಸುತಿದೆ ಇಲ್ಲಿನ ಸರ್ಕಾರ . ಇಲ್ಲಿ ಮೆಚ್ಚತಕ್ಕ ಒಂದು ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತೇನೆ. ಲಸಿಕೆ ನೀಡಲೆಂದು ಅನೇಕ ಕೃತಕ ಕಟ್ಟಡಗಳನ್ನು ನಿರ್ಮಿಸಿದ್ದಾರೆ .ಎಲ್ಲರಿಗೂ ಲಸಿಕೆ ಉಚಿತ . ಅವರು ಮೊದಲು , ಇವರು ಮೊದಲು , ಇಲ್ಲಿನ ದೇಶದ ಪ್ರಜೆ ಮೊದಲು ಇದ್ಯಾವ ಬೇಧ ಭಾವ ಇಲ್ಲ. ನಾನು ಇವತ್ತು ಹೋದ ಕೇಂದ್ರದ ಬಗ್ಗೆನೇ ಹೇಳೋದಾದ್ರೆ ವಿಶಾಲವಾ ಕೃತಕವಾಗಿ ನಿರ್ಮಿಸಿದ ಕಟ್ಟಡ. ಬಾಗಿಲಿನಲ್ಲಿ ಸ್ವಾಗತಕಾರ ನಿಮ್ಮನ್ನು ಆಹ್ವಾನಿಸಿ , ಕೌಂಟರ್ ಗೆ ತೆರಳಲು ದಾರಿ ತೋರಿಸುತ್ತಾನೆ. ಅಲ್ಲಿನ ಸ್ವಾಗತಕಾರರಿಣಿ ಈ ದೇಶದ ಪ್ರಜೆ. ನಿಮಗೆ ಒಂದು ಚಿಕ್ಕ ಫಾರಂ ಕೊಟ್ಟು ಮುಂದೆ ಇರುವ ಮೇಜನ್ನು ತೋರಿಸಿ ಅಲ್ಲಿ ಹೋಗಿ ನಿಮ್ಮ ಹೆಸರು ಮೊಬೈಲ್ ನಂಬರ್ ವಿವರ ದಾಖಲಿಸಿ , ನಿಮ್ಮ ಗುರುತು ಚೀಟಿ ಕೈಯಲ್ಲಿ ಇಟ್ಟುಕೊಳ್ಳಿ ಎನ್ನುತ್ತಾರೆ . ಅಲ್ಲಿ ವಿವರ ದಾಖಲಿಸಿದ ಮೇಲೆ ನಮಗೆ ಅಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ನಮ್ಮ ಸರದಿ ಬಂದಾಗ ನಮ್ಮ ಬಿಪಿ ಚೆಕ್ ಮಾಡಿ ನಂತ್ರ ನಮಗೆ ಬೇರಾವ ಸಮಸ್ಯೆಗಳಿಲ್ಲದಿದ್ದಲ್ಲಿ ಲಸಿಕೆ ಕೊಟ್ಟು ಮುಂದಿನ ಡೋಸ್ 21 ದಿನಗಳ ನಂತ್ರ , ನಿಮ್ಮ ಮೊಬೈಲ್ ಗೆ ಮೆಸೇಜ್ ಕಳುಹಿಸುತ್ತೆವೆ ಎನ್ನುತ್ತಾರೆ. ಕುಡಿಯುವ ನೀರಿನ ವ್ಯವಸ್ಥೆ , ಲಸಿಕೆ ತೆಗೆದುಕೊಂಡ ಮೇಲೆ , ಯಾವುದೇ ತಕ್ಷಣದ ಅಡ್ಡ ಪರಿಣಾಮ ಗುರುತಿಸಲು , 10 ನಿಮಿಷ ಅಲ್ಲೇ ಕುಳಿತುಕೊಳ್ಳುವ ವ್ಯವಸ್ಥೆ , ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ , ಎಷ್ಟೇ ದೊಡ್ಡ

 ವ್ಯಕ್ತಿಯಾಗಲಿ , ಸರದಿ ಸಾಲಿನಲ್ಲೇ ಬರಬೇಕು . ಒಟ್ಟಿನಲ್ಲಿ ಅಚ್ಚುಕಟ್ಟಿನ ವ್ಯವಸ್ಥೆ. ಇನ್ನು ಲಸಿಕೆಯ ಬಗ್ಗೆ ಹೇಳೋದಾದ್ರೆ ತೆಗೆದು ಕೊಂಡದ ಮೇಲೆ  ಸಲ್ಪ ನೋವು ಹಾಗು ತಲೆ ನೋವು ಇರುತ್ತೆ. ಇನ್ನು ಇದರಿಂದ ಎಷ್ಟು ಒಳ್ಳೇದಾಗುತ್ತೆ ಗೊತ್ತಿಲ್ಲ. ಅಂದ್ರೆ ಒಳ್ಳೇದಾಗುತ್ತೆ ಅನ್ನುವ ವಿಶ್ವಾಸ ,ನಂಬಿಕೆ!ಮುಂದಿನ ಪೀಳಿಗೆಯ ಬಗ್ಗೆ ಕಾಳಜಿ .

 ಆದರೆ ಒಂದು ಮಾತು ನಿಜ ಜಗತ್ತಿನ್ನ ಯಾವುದೇ ಸರಕಾರಕ್ಕೂ ಲಸಿಕೆ ಕಡ್ಡಾಯ ಎಂದು ಹೇಳುವ ಧೈರ್ಯ ಇನ್ನು ಬಂದಿಲ್ಲ. ಎಂದು  ಯಾರಿಗೂ ಯಾವುದೇ ಅಡ್ಡ ಪರಿಣಾಮ ಆಗೋದೇ ಇಲ್ಲ ಎಂದು ಹೇಳುವ ಆತ್ಮ ವಿಶ್ವಾಸ ಇನ್ನು ಬಂದಿಲ್ಲ.

ಇನ್ನು ನಮ್ಮ ದೇಶದ ಬಗ್ಗೆ  ಹೇಳೋದಾದ್ರೆ ಇಲ್ಲಿ ಯಾವುದೇ ವಿಚಾರವಿರಲಿ ಇಡೀ ದೇಶ ಒಕ್ಕೊರೊಲಿನಿಂದ ಯಾವುದನ್ನೂ ಇದುವರಗೆ ಒಪ್ಪಿಕೊಂಡ ಇತಿಹಾಸವೇ ಇಲ್ಲ. ಇಲ್ಲಿ ಏನು ಕಥೆ ಅಂದ್ರೆ ಎಲ್ಲರಿಗೂ ಲಾಭ ಪಡೆದುಕೊಳ್ಳುವ ತುರಾತುರಿ ! ಆದರೆ ಅಂತಿಮವಾಗಿ ಬಲಿಪಶು ನಾವೇ ಜನ ಸಾಮಾನ್ಯರು.ಸ್ವದೇಶೀ ನಿರ್ಮಿತ ಲಸಿಕೆ ಎನ್ನುವ ಹೆಮ್ಮೆ ಒಂದು ಕಡೆ . ಆದರೆ ಲಸಿಕೆ ಪರೀಕ್ಷೆ ಸಂಪೂರ್ಣಗೊಳ್ಳುವ ಮೊದಲೇ ಅನುಮೋದನೆ ದೊರೆತಿದೆ ಎನ್ನುವ ಆತಂಕ ! ಸಾಲದಕ್ಕೆ ರಾಜಕಾರಣಿಗಳು ಬರಿ ಬಾಯಿ ಮಾತಿನಲ್ಲಿ  ಲಸಿಕೆ ಸುರಕ್ಷಿತ ಎನ್ನುತ್ತಿದ್ದಾರೆ ವಿನಾ ತಾವೇ ಮುಂದಾಗಿ ಲಸಿಕೆ ಹಾಕಿಸಿಕೊಂಡು ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿಲ್ಲ. ನೆನಪಿಡಿ ಜನರಿಗೆ ಯಾವುದೇ ಲಸಿಕೆಗಳ ಬಗ್ಗೆ ಗೊತ್ತಿಲ್ಲ. ಅವರಿಗೆ ಅರಿವು ಮೂಡಿಸಿ ಆತ್ಮವಿಶ್ವಾಸ ತುಂಬಿಸಬೇಕಾಗಿರುವುದು ಮೊದಲು ಮಾಡಬೇಕಾಗಿರುವ ಕೆಲಸ. ಇಲ್ಲಿ ಸರ್ಕಾರ ನಡೆಸುವವರೇ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದರೆ , ಜನ ಸಾಮಾನ್ಯನಿಗೆ ಎಲ್ಲಿಂದ ಧೈರ್ಯ ಬರಬೇಕು ? ಹಾಗಾಗಿ ಹೆಚ್ಚಿನವ್ರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಇನ್ನು ನಮ್ಮ ಮಾಧ್ಯಮಗಳು , ನಮ್ಮ ಲಸಿಕೆ ಶ್ರೇಷ್ಠ , ಚೀನಾ ಲಸಿಕೆ ಚೆನ್ನಾಗಿಲ್ಲ ಹೀಗೆ ಬೇಡದಿರುವ ವಿಚಾರಗಳನ್ನು ತೋರಿಸುವಲ್ಲಿ ಮಗ್ನರಾಗಿದ್ದಾರೆ ವಿನಾ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಆದರೆ ಇಲ್ಲಿ  ಯುಎಇ ಯಲ್ಲಿ ಬೇರೇನೇ ನೋಟ ನನಗೆ ನೋಡಲು ಸಿಗುತ್ತಿದೆ. ಒಂದು ಚಿಕ್ಕ ಉದಾಹರಣೆ ಕೊಡೋದಾದ್ರೆ , ಅಬುದಾಭಿ ಚರ್ಚ್ ಒಂದರ ಪ್ರದಾನ ಗುರುಗಳು ನಮ್ಮ ಮಂಗಳೂರಿನವರು.ವಾರದ ಕೊನೆಯಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿ ಚರ್ಚಿನ ಆವರಣದಲ್ಲೇ ಲಸಿಕೆ ನೀಡುವ ಕಾರ್ಯಕ್ರಮ ಕಳೆದ ವಾರ ಹಮ್ಮಿಕೊಂಡಿದ್ದರು. ಪೂಜೆಗಾಗಿ ಚರ್ಚ್ ಗೆ ಬಂದ ಜನ ನಂತರ ಲಸಿಕೆ.ಹೀಗೆ ಆ ಎರಡು ದಿನದಲ್ಲಿ ಚರ್ಚ್ ಆವರಣದಲ್ಲಿ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ 7000 . ನಮ್ಮ ದೇಶದಲ್ಲೂ ಕೂಡ ಹೀಗೆ ಪ್ರತಿಯೊಂದು ಸಂಗ ಸಂಸ್ಥೆಗಳು , ಧಾರ್ಮಿಕ ಸಂಸ್ಥೆಗಳು , ಸಂಘಟನೆಗಳು , ಕಚೇರಿಗಳು ಎಲ್ಲರೂ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು. ಜನರಲ್ಲಿ ಜಾಗ್ರತಿ ಮೂಡಿಸಬೇಕು. ಆಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಗಾಗಿ ಸುರಕ್ಷಿತ ವಾತಾವರಣವನ್ನು ನಿರ್ಮಿಸಿ ಕೊಡಬಹುದು.


ಪ್ರಕಾಶ್ /ಮಲೆಬೆಟ್ಟು



0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.