ದೇಶಪ್ರೇಮಿ ಚಂದ್ರಶೇಖರ್ ಆಜಾದ್

ಚಂದ್ರಶೇಖರ್ ಆಝಾದರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ.

Originally published in kn
Reactions 0
563
Deepak Shenoy
Deepak Shenoy 12 Sep, 2020 | 1 min read
India Freedom Movement

ಬಡವ ನೀ ಮಡಗಿದಂಗಿರು ಎನ್ನುವ ಪ್ರಸಿದ್ದ ಗಾದೆಯೊಂದು ಇರುವದು ಎಲ್ಲರಿಗೂ ಗೊತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೇವಲ ಒರ್ವ ತೋಟದ ಮಾಲಿಯ ಮಗನಾಗಿ ಜನಿಸಿದರೂ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳುವಳಿಗೆ ದುಮುಕಿ ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ‌ಆ॒ಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!” ಎಂಬ ಪ್ರತಿಜ್ಞೆಗೈದು ಬಿಳಿಮುಖದ ಇಂಗ್ಲೀಷರಿಗೆ ಮುಂಕುಬೂದಿ ಎರಚುತ್ತಾ, ಅಂದಿನ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸುತ್ತಾ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಚಂದ್ರಾರ್ಕ ಹೆಸರು, ಕೀರ್ತಿ ಉಳಿಸಿ ಹೋದವರು ಅಜೇಯ ಕ್ರಾಂತಿಕಾರಿ ಚಂದ್ರಶೇಖರ ಅಜಾದ. 

ಇಂದಿಗೆ ೧೧೪ ವರ್ಷಗಳ ಹಿಂದೆ ಅಂದರೆ ೨೩ ಜುಲೈ ೧೯೦೬ರಂದು ಮಧ್ಯಪ್ರದೇಶದ ಭಾವರಾ ಎಂಬ ಹಳ್ಳಿಯಲ್ಲಿ ತೀರಾ ಬಡ ಕುಟುಂಬ ಒಂದರಲ್ಲಿ ಈ ಅಖಂಡ ದೇಶಪ್ರೇಮಿಯ ಶುಭ ಜನನವಾಯಿತು. ಇವರ ತಂದೆ ಸೀತಾರಾಮ ತಿವಾರಿ ಹಾಗೂ ಹೆತ್ತಮ್ಮ ಜಗರಾಣಿ ದೇವಿ. ಶಿಕ್ಷಣ ಕಲಿಯ ಬೇಕೆಂದು ಚಂದ್ರಶೇಖರ ಅಜಾದರವರು ಶಾಲೆಗೆ ಸೇರಿದ್ದರಾದರೂ ಮನೆಯಲ್ಲಿ ತಾಂಡವವಾಡುತ್ತಿರುವ ಬಡತನವನ್ನು ನೋಡಿ ಹೆಚ್ಚು ಹಣ ಸಂಪಾದಿಸಿ ಮನೆತನಕ ಕಷ್ಟಕ್ಕೆ ಸಹಾಯ ಮಾಡಬೇಕೆಂದು ಮಾಯಾನಗರಿ ಮುಂಬಯಿಗೆ ಹೀಗಿ ಕೂಲಿಕೆಲಸ ಮಾಡುವುದರ ಮೂಲಕ ತಮ್ಮ ಜೀವನವನ್ನು ಆರಂಭಿಸುತ್ತಾರೆ. ಆದರೆ ಇದರಿಂದಲೂ ಸಮಾಧಾನ ದೊರಕದೆ ಹೆಚ್ಚು ಓದಿ ಸಂಸ್ಕೃತ ವಿದ್ವಾಂಸನಾಗಬೇಕೆಂಬ ಆಶೆಯನ್ನಿಟ್ಟುಕೊಂಡು ಕಾಶಿಗೆ ಹೋಗುತ್ತಾರೆ. 

ಪೊಲೀಸರಿಗೆ ಸಿಗದೇ, ಅಂಗ್ಲರಿಗೆ ಸಿಂಹ ಸ್ವಪ್ನರಂತೆ ಕಾಡಿದವರು ಅಜೇಯ ಕ್ರಾಂತಿಕಾರಿ ಚಂದ್ರ ಶೇಖರ ಆಜಾದ್. ವೀರ ಭದ್ರ ತಿವಾರಿ ಎಂಬ ಮಿತ್ರನ ದ್ರೋಹಕ್ಕೆ ಬಲಿಯಾಗಿ ಪೋಲಿಸರ ಕೈಗೆ ಸಿಕ್ಕರೂ, ಧೃತಿಗೆಡದೆ ಸುಮಾರು ೮೦ಕ್ಕೂ ಪೋಲೀಸರ ಅಕ್ರಮಣವನ್ನು ಒಬ್ಬಂಟಿಯಾಗಿ ಎದುರಿಸಿ, ಕೊನೆಗೆ ತನ್ನಲ್ಲಿರುವ ಗುಂಡು ಖಾಲಿಯಾಗುತ್ತಿದಂತೆ, ಅಂತಿಮ ಗುಂಡನ್ನು ತನಗೆ ತಾನೇ ಹಾರಿಸಿಕೊಂಡು ತಾಯಿ ಭಾರತಿಗೆ ತನ್ನ ಪ್ರಾಣವನ್ನು ಅರ್ಪಿಸಿದ ಅಮರ ಕ್ರಾಂತಿಕಾರಿ ಚಂದ್ರ ಶೇಖರ್ ಆಜಾದ್.

ಚಂದ್ರಶೇಖರ ಅಜಾದರು ಸ್ವಾತಂತ್ರ್ಯ ಚಳುವಳಿಗೆ ದುಮುಕಲು ಪ್ರೇರಣೆ ನೀಡಿದ ಒಂದು ಘಟನೆ ಸಹ ತುಂಬಾ ಆಶ್ಚರ್ಯಕರವಾಗಿದೆ. 

ಅದು ಇಸವಿ ೧೯೨೧; ಚಂದ್ರಶೇಖರ ಅಜಾದರವರಿಗೆ ಆಗ ೧೫ರ ಹರಯ.... ಬಾಲ್ಯದಿಂದ ಯೌವನಾವಸ್ಥೆಗೆ ಕಾಲಿಡುತ್ತಿದ್ದ ರಸಸಮಯ ಘಳಿಗೆ.... ಕಾಶಿಯಲ್ಲಿ ಸಂಸ್ಕೃತ ಕಲಿತು ವಿದ್ವಾಂಸರಾಗ ಬೇಕೆಂದು ಹೋದ ಚಂದ್ರಶೇಖರ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ದೇಶಭಕ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ ಸ್ವಾತಂತ್ರ್ಯ ಸೇನಾನಿಗಳನ್ನು ಮನಬಂದಂತೆ ಥಳಿಸುತ್ತಿರುವುದನ್ನು ನೋಡುತ್ತಾರೆ. ಇದರಿಂದ ಅವರ ಬಿಸಿರಕ್ತ ಕುದಿಯುತ್ತದೆ ಕೋಪದಿಂದ ಕೆಳಗೆ ಬಿದ್ದಿದ್ದ ಕಲ್ಲೊಂದನ್ನು ಎತ್ತಿ ಒಬ್ಬ ಪೊಲೀಸನಿಗೆ ಹೊಡೆಯುತ್ತಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಚಂದ್ರಶೇಖರರವರನ್ನು ಹಿಡಿಯಲು ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಓಡತೊಡಗುತ್ತಾರೆ. ಅವರನ್ನು ಅಟ್ಟಿಸಿಕೊಂಡು ಪೊಲೀಸರು ಓಡ ತೊಡಗುತ್ತಾರೆ. ಓಡಿ ಓಡಿ ಪೊಲೀಸರಿಗೆ ಸುಸ್ತಾಗುತ್ತದೆ. ಆದರೂ ಬಿಡದೇ ಪೊಲೀಸರು ಚಂದ್ರಶೇಖರನನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. 

ನ್ಯಾಯಾಧೀಶರು ಚಂದ್ರಶೇಖರನಿಗೆ “ನಿನ್ನ ಹೆಸರೇನು? ಎಂದು ಕೇಳುತ್ತಾರೆ. ಅವರಿಗೆ ಗೌರವ ಕೊಡಬಾರದೆಂದು ತೀರ್ಮಾನಿಸಿದ ಚಂದ್ರಶೇಖರ “ನನ್ನ ಹೆಸರು ಅಜಾದ್ ಸ್ವಾಭಿಮಾನದಿಂದ ಹೇಳಿದರು.. 

ಅವರ ಉದ್ದಟತನದಿಂದ ಕ್ರೋಧಗೊಂಡ ನ್ಯಾಯಾಧೀಶರು ಚಂದ್ರಶೇಖರರಿಗೆ ಹನ್ನೆರಡು ಛಡಿ ಏಟಿನ ಶಿಕ್ಷೆ ನೀಡಿದರು. ಚಾಟಿಯಿಂದ ಹೊಡೆಯುತ್ತಿದ್ದ ಪ್ರತಿಯೊಂದು ಏಟಿಗೂ ಚಂದ್ರಶೇಖರ ಅವರು "ಭಾರತ್ ಮಾತಾ ಕಿ ಜೈ ಎನ್ನುತ್ತಿದ್ದರಂತೆ. ಅಂದಿನಿಂದ ಚಂದ್ರಶೇಖರ ಹೆಸರಿ ಅಜಾದ್ ಜೊತೆಯಾಗಿ ಚಂದ್ರಶೇಖರರ ಹೆಸರು ಚಂದ್ರಶೇಖರ ಅಜಾದ ಎಂದು ಬದಲಾಯಿತು. ಸಂಸ್ಕೃತ ವಿದ್ವಾಂಸರಾಗ ಬೇಕೆಂದು ಕಾಶಿಗೆ ಬಂದ ಚಂದ್ರಶೇಖರ ಅವರು ಇಲ್ಲಿಂದ ಪೂರ್ಣಪ್ರಮಾಣದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಮತ್ತು ಹಿಂದೂಸ್ತಾನ್ ರಿಪಬ್ಲಿಕನ್ ಆರ್ಮಿಯ ಸದಸ್ಯರಾಗಿ ರಾಮಪ್ರಸಾದ್ ಬಿಸ್ಮಿಲ್ ಅವರ ಹಿಂಬಾಲಕರಾದರು. ಬಿಸ್ಮಿಲ್ ಅವರ ಮಾರ್ಗದರ್ಶನದಲ್ಲಿ ಆಗಸ್ಟ್ ೯, ೧೯೨೫ರಂದು ಕಾಕೋರಿ ಎಂಬಲ್ಲಿ ಸರಕಾರಿ ಖಜಾನೆಯನ್ನು ಲೂಟಿ ಮಾಡಿದರು. ಈ ಲೂಟಿಯಲ್ಲಿ ಭಾಗವಹಿಸಿದ್ದ ಇತರ ಎಲ್ಲಾ ಕ್ರಾಂತಿಕಾರಿಗಳನ್ನು ಪೊಲೀಸರು ಬಂಧಿಸಿದರೂ ಸಹ ಚಂದ್ರಶೇಖರ ಅಜಾದ್‌ರನ್ನು ಹಿಡಿಯಲಾಗಲಿಲ್ಲ. ಈ ಕಾಕೋರಿ ದರೋಡೆಯಲ್ಲಿ ಭಾಗವಹಿಸಿದ ಬಿಸ್ಮಿಲ್ಲಾ ಸಹಿತ ಮೂವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಆಗ ಹಿಂದೂಸ್ತಾನ್ ರಿಪಬ್ಲಿಕನ್‌ನ ಪೂರ್ಣ ಜವಾಬ್ದಾರಿ ಚಂದ್ರಶೇಖರ ಅಜಾದ್ ಅವರ ಹೆಗಲ ಮೇಲೆ ಬಿತ್ತು. ಮುಂದೆ ಭಗತ್ ಸಿಂಗ್ ಸೇರ್ಪಡೆಯ ನಂತರ ಇದರ ಹೆಸರನ್ನು ಹೆಸರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಎಂದು ಬದಲಾಯಿಸಲಾಯಿತು. ಆಗ ಚಂದ್ರಶೇಖರ ಅಜಾದ್ ಅವರು ಇದರ ಸೇನಾಪತಿಯಾದರು. 

ಚಂದ್ರಶೇಖರ ಅಜಾದ್ ಅವರ ಮಾರ್ಗದರ್ಶನದಲ್ಲಿಯೇ ಲಾಲ್ ಲಜಪತ್ ರಾಯ್ ಅವರ ನಿಧನಕ್ಕೆ ಕಾರಣರಾದ ಸ್ಕಾಟ್ ಎಂಬ ಅಧಿಕಾರಿಯನ್ನು ಕೊಲ್ಲುವ ಯೋಜನೆ ರೂಪಿಸಲಾಯಿತು. ಭಗತ್‌ಸಿಂಗ್, ರಾಜಗುರು ಹಾಗೂ ಚಂದ್ರಶೇಖರ ಅಜಾದ್ ಅವರು ಸ್ಯಾಂಡರ್ಸ್ ಎಂಬ ಅಧಿಕಾರಿಯನ್ನೇ ಸ್ಕಾಟ್ ಭಾವಿಸಿ ಕೊಂದು, ಪೊಲೀಸರ ಕೈಗಳಿಗೆ ಸಿಗದೆ ಪರಾರಿಯಾದರು. ಅಜಾದ್‌ರ ಮಾರ್ಗದರ್ಶನದಲ್ಲಿ ಬ್ರಿಟಿಷರಿಗೆ ಎಚ್ಚರಿಕೆ ನೀಡಲು ಪಾರ್ಲಿಮೆಂಟ್‌ನಲ್ಲಿ ಬಾಂಬ್ ಸ್ಫೋಟಿಸುವ ಯೋಜನೆಯನ್ನೂ ರೂಪಿಸಲಾಯಿತು. ಈ ಸಂದರ್ಭದಲ್ಲಿ ಬ್ರಿಟಿಷರು ಭಗತ್‌ಸಿಂಗ್ ಮತ್ತು ಬುಟುಕೇಶ್ವರ ದತ್ತರನ್ನು ಬಂಧಿಸಿದರು. ಆದರೆ ಚಂದ್ರಶೇಖರ ಅಜಾದರನ್ನು ಬಂಧಿಸುವ ಪೊಲೀಸರು ಪ್ರಯತ್ನ ಫಲ ನೀಡಲಿಲ್ಲ. ಬ್ರಿಟಿಷರು ಜಲಿಯನ್ ವಾಲ್‌ಬಾಗ್ ಹತ್ಯಾಕಾಂಡ ನೆಡೆಸಿದ ನಂತರವಂತೂ ರಕ್ತಕ್ರಾಂತಿ ಮಾಡಿಯಾದರೂ ಬ್ರಿಟಿಷರಿಂದ ಭಾರತವನ್ನು ಸ್ವಾತಂತ್ರ್ಯ ಮಾಡಲೇ ಬೇಕೆಂದು ದೃಢ ತೀರ್ಮಾನ ಕೈಗೊಂಡ ಚಂದ್ರಶೇಖರ ಅಜಾದ್ ಅವರು ಹಲವಾರು ವಿದ್ವಂಸಕ ಕೃತ್ಯಗಳಲ್ಲಿ ಭಾಗವಹಿಸಿ ತಮ್ಮ ದೇಶಪ್ರೇಮವನ್ನು ತೋರಿಸಿ ಕೊಟ್ಟರು.

ಊಖಂ ಸಂಘಟನೆಯ ಸ್ಥಾಪನೆಯಲ್ಲೂ ಚಂದ್ರಶೇಖರ ಆಜಾದರು ಪಾಲ್ಗೊಂಡಿದ್ದರು. ಇವರೊಂದಿಗಿದ್ದ ಇವರ ಬಲಗೈ ಬಂಟನೆಂದು ಕರಸಿಕೊಳ್ಳುವ ವಿಶ್ವನಾಥ್ ಗಂಗಾಧರ್ ಅವರು ಬರೆದ ಅಜಾದರ ಜೀವನ ಚರಿತ್ರೆಯಲ್ಲಿ ಅಜಾದರ ಬಗ್ಗೆ ಇಂಥಹ ಅಪರಿಮಿತ ವಿಷಯಗಳು ತಿಳಿದು ಬರುತ್ತವೆ. 

ಗುಂಡು ಹಾರಿಸುವುದರಲ್ಲಿ ಅದ್ಭುತ ಗುರಿಕಾರರಾಗಿದ್ದ ಅಜಾದರು ವಿದ್ವಂಸಕ ಕೃತ್ಯಗಳನ್ನು ನಡೆಸಲು ರಚಿಸಿದ ತಂಡದ ಸದಸ್ಯರಿಗೆ ತರಬೇತಿ ನೀಡುವಾಗ ತಮ್ಮ ಈ ಅದ್ಭುತ ಕೌಶಲ್ಯವನ್ನು ಅವರೆಲ್ಲರಿಗೂ ಕಲಿಸಿ ಪಂಡಿತ್ ಎಂದು ಕರೆಸಿ ಕೊಳ್ಳುತ್ತಿದ್ದರು. ಧಿಮಾನ್‌ಪುರ ಎಂಬ ಹಳ್ಳಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಲೆ ಪಂಡಿತ್ ಹರಿಶಂಕರ ಬ್ರಹ್ಮಚಾರಿ ಎಂಬ ಮಾರುವೇಷದಿಂದ ಗುರಿಕಾರರನ್ನು ತಯಾರು ಮಾಡುತ್ತಿದ್ದರು. ಚಂದ್ರಶೇಖರ ಅಜಾದರ ಗೌರವ ಸ್ಮರಣೆಗಾಗಿ ಧಿಮಾರ್‌ಪುರವನ್ನು ಈಗ ಅಜಾದ್‌ಪುರ ಎಂದು ಕರೆಯಲಾಗುತ್ತದೆ.

ಅಂತಿಮವಾಗಿ ೧೯೩೧ರ ಫೆಬ್ರವರಿ ೨೭ರಂದು ಅಲಹಾಬಾದಿನ ಆಲ್ಫ್ರೆಡ್ ಪಾರ್ಕಿನಲ್ಲಿ ಇವರಿರುವ ಬಗ್ಗೆ ಮಾಹಿತಿಯನ್ನು ವೀರಭದ್ರ ತಿವಾರಿಂಬ ದೇಶದ್ರೋಹಿ ಪೊಲೀಸರಿಗೆ ತಿಳಿಸಿದ್ದರಿಂದ ಎಂಬತ್ತರಷ್ಟು ಪೊಲೀಸರು ಆ ಉದ್ಯಾನವನವನ್ನು ಸುತ್ತುವರಿದರು. ಆದರೆ ಚಿರತೆಯಂತೆ ಅತ್ತಿತ್ತ ಓಡಾಡುತ್ತಿದ್ದ ಅಜಾದರನ್ನು ಹಿಡಿಯಲು ಅಷ್ಟೊಂದು ಪೊಲೀಸರಿಂದಲೂ ಸಾಧ್ಯವಾಗಲಿಲ್ಲ. ಪೊಲೀಸರಿಗೆ ಅಜಾದರು ಅಷ್ಟು ತೀವ್ರವಾದ ಪ್ರತಿರೋಧವನ್ನು ತೋರುತ್ತಿದ್ದರು. ತಮ್ಮ ಸ್ನೇಹಿತ ಸುಖದೇವನನ್ನು ರಕ್ಷಿಸಿ ಉದ್ಯಾನವನದಿಂದ ಸುರಕ್ಷಿತವಾಗಿ ಹೊರಗೆ ಕಳುಹಿಸಿದ ನಂತರ ತಾನು ಜೀವಂತವಾಗಿ ಪೊಲೀಸರ ಕೈಗಳಿಗೆ ಸಿಕ್ಕಬಾರದೆಂದು ನಿರ್ಣಯಿಸಿ ಕೊನೆಯಗುಂಡಿನಿಂದ ತಮ್ಮ ತಲೆಗೆಗ ಗುಂಡು ಹೊಡೆದುಕೊಂಡು ವೀರಸೇನಾನಿಯಂತೆ ವೀರಮರಣವನ್ನಪ್ಪುತ್ತಾರೆ. ಭಾರತ ಮಾತೆಯ ವೀರಪುತ್ರರಾದ ಇವರ ದೇಶಪ್ರೇಮ ಇಂದಿನ ನಮಗೆಲ್ಲರಿಗೂ ಪ್ರೇರಣೆಯಾಗಿದೆ. 

0 likes

Published By

Deepak Shenoy

deepakshenoy

Comments

Appreciate the author by telling what you feel about the post 💓

Please Login or Create a free account to comment.