ಪರಿಸರ ಮಾಲಿನ್ಯವು ಸಮಸ್ಯೆಗಳ ಆಕರ!! (ಭಾಗ - 1)

ಪ್ರಸ್ತುತ ದಿನಗಳಲ್ಲಿ ನಾವು ನಮ್ಮ ಸುಂದರ ಮತ್ತು ವಿಶಾಲವಾದ ಪರಿಸರವನ್ನು ಸುಖಕ್ಕೋಸ್ಕರ ಅದನ್ನು ಕೆಡಕುಗೊಳಿಸಿ ಮುಂದಿನ ಪೀಳಿಗೆಯ ಜನರು ಪರಿಸರದ ಮಾಲಿನ್ಯದ ಜತೆ ಬದುಕುವ ಪರಿಸ್ಥಿತಿಯನ್ನು ತಂದಿಟ್ಟಿದ್ದೇವೆ.

Originally published in kn
Reactions 0
468
Deepak Shenoy
Deepak Shenoy 29 Sep, 2020 | 1 min read
Nature Our Environment Pollution

ಮಾನವನ ಜೀವವಿಕಾಸವಾಗಿ ೬೦ರಿಂದ ೭೦ಲಕ್ಷ ವರ್ಷಗಳೇ ಸಂದಿವೆ. ಎರಡೂವರೆಯಿಂದ ಒಂದುವರೆ ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಜೀವಿಸುತ್ತಿದ್ದ ಹೆಬ್ಬುಲಿ ಪ್ರಜಾತಿಯ ಮನುಷ್ಯನೇ ಮಾನವನ ವಿಕಾಸಪಥದಲ್ಲಿ ಮೊದಲ ಆನಂತರದಲ್ಲಿ ಸುಮಾರು ೨೫ರಿಂದ ೩೦ ಸಾವಿರ ವರ್ಷಗಳ ಹಿಂದೆ ಹೋಮೋಸೆಪಿಯನ್ ಜನ ಆಫ್ರಿಕಾದಿಂದ ವಿಶ್ವದ ಎಲ್ಲಾ ಕಡೆ ಹೋಗಿ ನೆಲೆಸಿರಬಹುರೆಂದು ಸಂಶೋಧಕರು ಅಂದಾಜಿಸುತ್ತಾರೆ. ಜೀವಿವಿಕಾಸದ ಕ್ರಿಯಾತಂತ್ರವನ್ನು ವಿವರಿಸಲು ಸರ್ವರೂ ಪ್ರಮುಖವಾಗಿ ಡಾರ್ವಿನ್ ಸಿದ್ಧಾಂತವನ್ನು ಒಪ್ಪುತ್ತಾರೆ. ಇಂಗ್ಲೆಂಡ್‌ನ ಡಾರ್ವಿನ್‌ರವರು “ಪ್ರಕೃತಿಯ ಕೈವಾಡದ ಮೂಲಕ ಜೀವಿಗಳ ವಿಕಾಸ ನಡೆಯುತ್ತದೆ ಎಂಬ ಸಿದ್ಧಾಂತವನ್ನು ಹಲವಾರು ಆಧಾರ, ಪುರಾವೆಗಳ ಮೂಲಕ ತೋರಿಸಿದರು. ಇದರರ್ಥ ಈ ಭೂಮಂಡಲದಲ್ಲಿ ಮನುಷ್ಯ ಸೂಪರ್ ಪವರ್ ಆಲ್ಲ. ಆತನೂ ಸಹ ಪ್ರಕೃತಿಯ ಕೂಸು. ಜೀವಸರಪಳಿಯ ಒಂದು ಭಾಗ. ಭೂಮಂಡಲದ ಮೇಲೆ ಜೀವಿಗಳು ಉಳಿಯ ಬೇಕಾದರೆ ಪ್ರಕೃತಿಯೂ ಸಹ ನಿತ್ಯನೂತನಳಾಗಿ ಇರಬೇಕು. ಇದನ್ನು ಅರಿತುಕೊಂಡ ನಮ್ಮ ಪೂರ್ವೀಕರು ಪ್ರಕೃತಿಯನ್ನು ತಾಯಿದೇವರೆಂದು ಪೂಜಿಸುತ್ತಿದ್ದರು. ಭೂಮಿಯ ಮೇಲಿರುವ ಎಲ್ಲಾ ಗಿಡ- ಮರ, ಪ್ರಾಣಿ-ಪಕ್ಷಿಗಳಿಗೂ ಒಂದೊಂದು ವಿಶೇಷಣೆಯನ್ನು ಕೊಟ್ಟು ಪೋಷಿಸಿಕೊಂಡು ಬರುತ್ತಿದ್ದರು. 

ಹೌದು ಮನುಷ್ಯನ ಜೀವವಿಕಾಸದಲ್ಲಿ ಆರಂಭದಲ್ಲಿ ಆದಿ ಮಾನವ ಆಹಾರಕ್ಕಾಗಿ ಪ್ರಕೃತಿಯನ್ನೇ ಆಶ್ರಯಿಸಿದ್ದ. ಪ್ರಕೃತಿ ಇಲ್ಲದೇ ಜನರಿಗೆ ಬದುಕಿಲ್ಲವೆಂದು ನಂಬಿದ್ದ. ಮುಂದೆ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಲು ಕಲಿತ, ತನಗೆ ಬೇಕಾದ ಧಾನ್ಯ, ಕಾಯಿಪಲ್ಲೆಯನ್ನು ಬೆಳಸಲು ಕಲಿತ, ಹಸು, ಕೋಳಿ, ಕುರಿಗಳ ಸಾಕಾಣಿಕೆ ಕಲಿತ. ಆದರೂ ಮನುಷ್ಯ ಪ್ರಕೃತಿಯನ್ನು ಆರಾಧಿಸುವ ತನ್ನ ಸಂಸ್ಕೃತಿಯನ್ನು ಮರೆಯದೇ ಗಿಡ, ಮರ, ನದಿ, ಸಮುದ್ರಗಳನ್ನು ಪೂಜಿಸುತ್ತಿದ್ದ. 

ವಿದ್ಯುತ್ ತಯಾರಿಸಲು ಕಲಿತು ಹೊಸ ಹೊಸ ಯಂತ್ರಗಳನ್ನು ಸಂಶೋಧಿಸಿದ ನಂತರ ತನ್ನನ್ನು ತಾನೇ ರಾಜನೆಂದು ಗರ್ವಿಸಿದ. ಪ್ರಕೃತಿಯಲ್ಲ್ಲಿದ್ದ ಎಲ್ಲಾ ಜೀವಿಗಳು, ಮರ, ಗಿಡ, ಪಂಚಭೂತಗಳು ಮನುಷ್ಯರ ಸುಖ-ಭೋಗಕ್ಕೆಂದೇ ಇರುವುದು ಎಂದು ಭಾವಿಸಿ ಅವುಗಳ ಮೇಲೆ ಮನಸೋ ಇಚ್ಚೆಯಾಗಿ ದೌರ್ಜನ್ಯ ಎಸಗಲಾರಂಭಿಸಿದ. 

ಅತಿಯಾದ ಆಶೆ, ನಾಗಾಲೋಟದಲ್ಲಿ ಎರಿಕೆಯಾಗುತ್ತಿರುವ ಜನಸಂಖ್ಯೆ. ಭೋಗಜೀವನದ ಬಯಕೆಯಿಂದ ಪರಸರದ ಅಂಶಗಳಾದ ಗಾಳಿ, ಭೂಮಿ, ನೀರು, ಆಕಾಶಗಳೆಲ್ಲವನ್ನೂ ಕಲುಷಿತಗೊಳಿಸದ. ಅದರಿಂದ ಮನುಕುಲಕ್ಕೇ ಕುತ್ತಾಯಿತು. ಪ್ರಕೃತಿ ಕೊಳೆತು ಭೂಮಂಡಲದ ಸಮಸ್ತ ಜೀವರಾಶಿಗೆ ಮಾರಕವಾಗಿದೆ. ಜೀವಿಗಳ ಆರೋಗ್ಯಕ್ಕೆ ಅತ್ಯವಶ್ಯಕವಾಗಿರುವ ಆಹಾರ, ನೀರು, ಗಾಳಿ ಎಲ್ಲವೂ ವಿಷಪೂರಿತವಾಗಿ ಬದಲಾಗಿವೆ. ಅದರೊಂದಿಗೆ ಮಾನವನ ವ್ಯಾಪಾರಿ ಬುದ್ಧಿ, ಹಣದಾಹದ ಕಾರಣದಿಂದ ಪ್ರಕೃತಿಯ ತಾಳತಪ್ಪಿ ನೈಸರ್ಗಿಕ ಅವಘಡಗಳು ದೊಡ್ಡ ಪ್ರಮಾಣದಲ್ಲಿ ಸಂಭವಿಸುತ್ತಿವೆ. ಬರಗಾಲ, ಅತಿವೃಷ್ಟಿ, ಅನಾವೃಷ್ಟಿ, ಸಾಂಕ್ರಾಮಿಕ ರೋಗಗಳು, ಕಾಡ್ಗಿಚ್ಚು, ಸುನಾಮಿಗಳಿಂದ ಸಹಸ್ರವಲ್ಲ ಲಕ್ಷಗಟ್ಟಲೆ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕರೋನಾದ ತಾಜಾ ಉದಾಹರಣೆ ನಮ್ಮ ಮುಂದೆಯೇ ಇದೆ. 


0 likes

Published By

Deepak Shenoy

deepakshenoy

Comments

Appreciate the author by telling what you feel about the post 💓

Please Login or Create a free account to comment.