ಪರಿಸರವನ್ನು ನುಂಗುತ್ತಿದೆ ಜನಸಂಖ್ಯಾ ಸ್ಫೋಟ!!

ಪ್ರಸ್ತುತ ದಿನಗಳಲ್ಲಿ ಹಚ್ಚಾಗುತ್ತಿರುವ ಜನಸಂಖ್ಯೆಯ ಸ್ಫೋಟದಿಂದ ನಮ್ಮ ಪರಿಸರವು ಹದಗೆಡುತ್ತಿದೆ. ಪರಿಸರಕ್ಕೆ ಹಲವಾರು ತೊಂದರೆಗಳು ಉಂಟಾಗುತ್ತಿವೆ. ಆದ್ದರಿಂದ ನಾವು ಜನಸಂಖ್ಯಾ ಸ್ಫೋಟವನ್ನು ತಡೆಯುವುದು ಅತೀ ಅವಶ್ಯಕವಾಗಿದೆ.

Originally published in kn
Reactions 2
1747
Deepak Shenoy
Deepak Shenoy 27 Aug, 2020 | 1 min read
Over Population Our Environment

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಾತಿನಂತೆ “ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ ಆದರೆ ನಾವು ಪ್ರಕೃತಿಯ ಒಂದು ಭಾಗ ಮಾತ್ರ.” ಇದನ್ನು ಜೀರ್ಣಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಕ್ಕಿಲ್ಲ ಅಲ್ಲವೇ? ಆದರೂ ಅನಿವಾರ್‍ಯ!

‘ಪರಿಸರ‌ ಇದು ನಿಸರ್ಗದ ಸೃಷ್ಠಿ. ಮನುಷ್ಯನೂ ಸಹ ನಿಸರ್ಗದಿಂದಲೇ ಸೃಷ್ಠಿಯಾದವನು. ಅವನನ್ನು ಈ ಸೃಷ್ಠಿಯ ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಕರೆಯುತ್ತಾರೆ. ನಮ್ಮ ಸುತ್ತಮುತ್ತಲಿರುವ ಚರಾಚರ ವಸ್ತುಗಳ ಸಂಚಿತ ರೂಪವೇ “ಪರಿಸರ. ತಾನು ನೆಲ, ಜಲಗಳಲ್ಲಿ ಹುಟ್ಟಿಸಿದ ಜೀವಜಂತುಗಳ ಆರೋಗ್ಯಕರ ಬದುಕಿಗಾಗಿ, ಅವುಗಳ ಸಂತಾನಗಳ ರಕ್ಷಣೆ, ಬೆಳವಣಿಗೆಗಾಗಿ ನಿಸರ್ಗ ‘ಪರಿಸರವನ್ನು ಸೃಷ್ಠಿಸಿದೆ. ಜೀವಿಗಳ ಉಳುವಿಗಾಗಿ ನಮ್ಮ ಸುತ್ತಲಿರುವ ಮರ, ಗಿಡ, ಗಾಳಿ, ನೀರು, ವಾಯು, ನೆಲ ಇವುಗಳನ್ನು ಪರಿಸರದ ಭಾಗಗಳೆಂದು ಕರೆಯುತ್ತಾರೆ. ನಮ್ಮ ಋಷಿಮುನಿಗಳ ಕಾಲದಲ್ಲಿ ಇವುಗಳನ್ನು ಪಂಚಭೂತಗಳೆಂದು ಕರೆಯಲಾಗುತ್ತಿತ್ತು. ಈ ಪಂಚಭೂತಗಳನ್ನು ರಕ್ಷಿಸುವುದೇ ಪರಿಸರ ರಕ್ಷಣೆ. ದುರದೃಷ್ಟದ ವಿಷಯವೆಂದರೆ ಇಂದಿನ ಮನುಷ್ಯನು ಈ ಪರಿಸರ ಕೇವಲ ತನಗಾಗಿಯೇ ಸೃಷ್ಠಿಯಾಗಿದೆ ಎಂದು ಭಾವಿಸಿ ಪರಿಸರದ ಮೇಲೆ ಅತಿಯಾಗಿ ಅವಲಂಭಿತನಾಗಿರುವುದರಿಂದ, ಜನಸಂಖ್ಯೆಯ ಮೇಲೆ ಸ್ವ ನಿಯಂತ್ರಣವನ್ನು ಹೇರಿಕೊಳ್ಳದೇ ಇರುವುದರಿಂದ ಇಡೀ ವಿಶ್ವವೇ ಸಂಕಷ್ಟದ ಹೆಬ್ಬಾಗಿಲಿಗೆ ಬಂದು ನಿಂತಿದೆ. ಇದಕ್ಕೆ ಕರೋನಾ ವೈರಸ್, ನಿಸರ್ಗ ಚಂಡಮಾರುತಗಳು ಇತ್ತೀಚಿನ ಉದಾಹರಣೆಗಳು. ಯಾರಾದರೂ ಒಂದು ಮರದ ಕೊಂಬೆಯ ಕೊನೆಯಲ್ಲಿ ಕುಳಿತು ಕೊಂಡು ಅದೇ ಕೊಂಬೆಯನ್ನು ಕಡಿಯುತ್ತಿದ್ದರೆ ನಾವೆಲ್ಲ ಗಹಗಹಿಸಿ ನಗುತ್ತೇವೆ. ಆದರೆ ನಾವೂ ಸಹ ಪರಿಸರದ ವಿಷಯದಲ್ಲಿ ಅದನ್ನೇ ಮಾಡುತ್ತಿದ್ದೇವೆ ಅನ್ನುವ ಸತ್ಯವನ್ನು ಮೆರೆತಿದ್ದೇವೆ!

ಪ್ರಸ್ತುತ ವಿಶ್ವದ ಜನಸಂಖ್ಯೆ ೭೭೦ ಕೋಟಿ ಇದೆ ಮತ್ತು ಈ ಜನಸಂಖ್ಯೆಯು ೨೦೨೫ರ ವೇಳೆಗೆ ೮೦೦ ಕೋಟಿ ತಲುಪುವ ನಿರೀಕ್ಷೆ ಇದೆ. ಬಹುತೇಕ ಜನಸಂಖ್ಯಾ ತಜ್ಞರ ಪ್ರಕಾರ ನಮ್ಮ ಈ ಭೂಮಿಗೆ ೧೦೦೦ ಕೋಟಿ ಜನರನ್ನು ಸಲಹುವ ಸಾಮರ್ಥ್ಯವಿದೆಯಂತೆ. ಹಾಗೆಂದು ಜನಸಂಖ್ಯೆ ಬೆಳೆಯಲು ಬಿಡುವುದು ಜಾಣತನವೇ? ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತವಾಗುತ್ತವೆ. ಜನಸಂಖ್ಯೆಯ ಹೆಚ್ಚಳದಿಂದಾಗಿ ವಸತಿ ಪ್ರದೇಶದ ನಿರ್ಮಾಣ ಕಾರ್ಯವೂ ದಿನೇ ದಿನೇ ಹೆಚ್ಚುತ್ತಿದೆ. ಹೀಗೆ ಜನರು ತಮ್ಮ ಅನುಕೂಲದ ಸಲುವಾಗಿ ಕಾಡುಗಳನ್ನು ಕಡಿಯುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 

ವಿಶ್ವದ ಜನಸಂಖ್ಯೆಯ ಪ್ರಮಾಣದಲ್ಲಿ ಭಾರತದ ಪಾಲು ಶೇ.೧೭ ರಷ್ಟಿದೆ. ಜನಸಂಖ್ಯೆಯಲ್ಲಿ ಚೀನಾದ ನಂತರ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಜನಸಂಖ್ಯೆಯ ಹೆಚ್ಚಳದಿಂದಾಗಿ ಸ್ಥಳದ ಅಭಾವ ಕಂಡುಬರುತ್ತಿದೆ. ಭಾರತದಲ್ಲಿ ೪೦೦ ಜನರಿಗೆ ಕೇವಲ ಒಂದು ಚದರ ಕಿ.ಮೀ.ನಷ್ಟೇ ಸ್ಥಳಾವಕಾಶವಿದ್ದರೇ, ಆಸ್ಟ್ರೇಲಿಯಾದಲ್ಲಿ ಇದೇ ಸ್ಥಳಾವಕಾಶದಲ್ಲಿ ಮೂರು ಜನರಿಗೆ ವಸತಿ ಸೌಲಭ್ಯ ಕಲ್ಪಿಸಬಹುದಾಗಿದೆ. ನಮ್ಮ ಭಾರತ ದೇಶವು ಹಲವಾರು ವರ್ಷಗಳಿಂದ ಅಭಿವೃದ್ಧಿಶೀಲ ರಾಷ್ಟ್ರವೇ ಆಗಿ ಉಳಿದಿದೆ. ಇದಕ್ಕೆ ಜನಸಂಖ್ಯೆಯ ಹೆಚ್ಚಳವೂ ಒಂದು ಪ್ರಮುಖ ಕಾರಣ ಎನ್ನಬಹುದು. 

ನಿಸರ್ಗದ ಪರಿಸರ ವ್ಯವಸ್ಥೆಯಲ್ಲ್ಲಿ ಒಂದು ರೀತಿಯ ಸಮತೋಲನ ಮತ್ತು ಜೀವಿ ಹಾಗೂ ಪರಿಸರದ ಮಧ್ಯೆ ಪರಸ್ಪರಾವಲಂಬನೆ ಇರುತ್ತದೆ. ಹಾಗೆಂದ ಮಾತ್ರಕ್ಕೆ ಮನುಷ್ಯನು ಪರಿಸರವನ್ನು ತನಗೆ ಬೇಕಾದಂತೆ ಬಳಸುವುದರಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ! ಆದರೆ ಮನುಷ್ಯನು ತನ್ನ ಸುಖ-ಭೋಗಕ್ಕಾಗಿ ವಿಜ್ಞಾನ-ತಂತ್ರಜ್ಞಾನಗಳ ಸಹಾಯದಿಂದ ಪರಿಸರವನ್ನು ದುರ್ಬಳಕೆ ಮಾಡುತ್ತಿದ್ದಾನೆ ಮೂಢನಂಬಿಕೆಯ ಹೆಸರಿನಲ್ಲಿ ಹಿಂದೆ ಪರಿಸರ ರಕ್ಷಣೆಗಾಗಿ ಬೆಳೆಸುತ್ತಿದ್ದ ದೇವರ ಕಾಡುಗಳನ್ನು ನಾಶಮಾಡಿದ. ನಮ್ಮ ಪೂರ್ವಜರು ಮರ-ಗಿಡಗಳನ್ನು ದೇವರೆಂದು ಪೂಜಿಸುತ್ತಿದ್ದ ನಂಬಿಕೆಯ ಬಗ್ಗೆ ಕುಹಕವಾಡಿ ಅವ್ಯಾಹಿತವಾಗಿ ಹಸಿರನ್ನು ನಾಶ ಪಡಿಸಿದ. ಅಲ್ಲದೆ ಕೃತಕ ವಸ್ತುಗಳನ್ನು, ತ್ಯಾಜ್ಯ ವಸ್ತುಗಳನ್ನು ಪರಿಸರಕ್ಕೆ ಬಿಡುಗಡೆ ಮಾಡಿ ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣನೂ ಸಹ ಆಗಿದ್ದಾನೆ.

 ನಿತ್ಯ ಈ ಭೂಮಂಡಲದಲ್ಲಿ ೨.೧೮ ಲಕ್ಷ ಶಿಶುಗಳ ಜನನವಾಗುತ್ತಿದೆ. ಅಂದರೆ ವಿಶ್ವದ ಜನಸಂಖ್ಯೆಗೆ ಪ್ರತಿವರ್ಷ ೮ ಕೋಟಿ ಹೊಸ ಮಾನವ ಜೀವಿಯ ಸೇರ್ಪಡೆಯಾಗುತ್ತಿದೆ ಎಂದರ್ಥ. ಇಷ್ಟೊಂದು ಬಾಯಿಗಳಿಗೆ ಆಹಾರ ಒದಗಿಸುವ ಜವಾಬ್ದಾರಿಯು ಪರಿಸರದ್ದೇ ಆದರೂ ಪರಿಸರ ನಾಶದ ನಡುವೆ ಜನಸಂಖ್ಯೆ ಮಿತಿ ಮೀರುತ್ತಿರುವುದು ಅಪಾಯದ ಸೂಚನೆಯಾಗಿ ಪರಿಣಮಿಸಿದೆ. 

ಜನಸಂಖ್ಯೆ ಎನ್ನವುದು ಬರೀ ಅಂಕಿ ಅಂಶಗಳ ಲೆಕ್ಕಾಚಾರವಾಗಷ್ಠೇ ಉಳಿದಿಲ್ಲ. ಬಹಳ ಹಿಂದಿನಿಂದಲೂ ಮಾನವ ಸಮಾಜದಲ್ಲಿ ಆಂತಕ ಮೂಡಿಸುತ್ತಲೇ ಬಂದಿದೆ ಈ ಜನಸಂಖ್ಯೆ ಎನ್ನುವ ಪದ. ಅದಕ್ಕೊಂದು ಉದಾಹರಣೆ ಎಂದರೆ ಕ್ರಿ.ಪೂ.೪ನೇ ಶತಮಾನದಲ್ಲಿ ವಿಶ್ವದ ಜನಸಂಖ್ಯೆ ಕೇವಲ ೨೦ ಕೋಟಿ ಇದ್ದಾಗಲೆ ಪ್ಲೇಟೋ ಮತ್ತು ಅರಿಸ್ಟಾಟಲ್‌ನಂತಹ ದಾರ್ಶನಿಕರು ಕಟ್ಟು ನಿಟ್ಟಿನ ಜನ ನಿಯಂತ್ರಣ ಕ್ರಮಗಳಿಗೆ ಸಲಹೆ ನೀಡಿದ್ದರು. ಅದನ್ನು ಪಾಲಿಸಿದೇ ನಾವಿಂದು ಅಪಾಯಕರ ಸ್ಥಿತಿಗೆ ಬಂದು ಮುಟ್ಟಿದ್ದೇವೆ.

ಮನುಷ್ಯನಿಗೆ ಬದುಕಲು ಬೇಕಾದ ಸೌಲಭ್ಯಗಳನ್ನು ಆತ ಪರಿಸರದಿಂದಲೇ ಪಡೆಯದೇ ಬೇರೆ ದಾರಿಯಿಲ್ಲ. ಜನಸಂಖ್ಯೆ ಹೆಚ್ಚಾದಂತೆ ನಮ್ಮೆಲರಿಗೂ ಬಳಸಲು ಬೇಕಾಗುವ ವಸ್ತುಗಳ ಪ್ರಮಾಣಾವು ಹೆಚ್ಚಾಗುತ್ತದೆ. ಉದಾಹರಣೆಗೆ ಮನುಷ್ಯ ತನ್ನ ಅಗತ್ಯತೆಗಾಗಿ ಬಳಸುತ್ತಿರುವ ಪ್ಲಾಸ್ಟಿಕ್‌ನಿಂದ ಬಾಟಲಿಯಿಂದ ಬಿಡುಗಡೆಯಾಗುವ ಕಾರ್ಬನ್ ಡೈ ಆಕ್ಸೈಡ್ ಹಾಗೂ ವಿಷ ಅನಿಲಗಳು ವಾತಾವgಣಕ್ಕೆ ಸೇರಿ ಜಾಗತಿಕ ತಾಪಮಾನವು ಹೆಚಾಚಗುತ್ತದೆ. ಒಂದು ಪ್ಲಾಸ್ಟಿಕ್ ಚೀಲವು ವಿಭಜನೆಯಾಗಲು ೧೦೦ ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ಪ್ಲಾಸ್ಟಿಕ್ ವಿಭಜನೆಯಾಗಿ ದೊಡ್ಡ ಪ್ರಮಾಣದಲ್ಲಿ ರಾಸಾಯನಕ ವಸ್ತುಗಳು ಹೊರಬೀಳುತ್ತವೆ. ಆದ್ದರಿಂದ ಆ ಭಾಗದಲ್ಲಿ ಭೂಮಿ ಬಂಜರು ಆಗುವ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತವೆ. ಪ್ಲಾಸ್ಟಿಕಿನಿಂದ ಉಂಟಾಗುವ ಜಲಮಾಲಿನ್ಯದಿಂದ ಸಂಪೂರ್ಣ ಆಹಾರ ಸರಪಳಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ಲಾಸ್ಟಿಕಿನಿಂದ ಸೋರಿಕೆಯಾಗುವ ವಿಷ ಭೂಮಿಗೆ ಸೇರಿ ಅಂತರ್ಜಲದಲ್ಲಿ ಲೀನವಾಗುತ್ತದೆ. ಇದರಿಂದ ಅಂತರ್ಜಲ ವಿಷಯುಕ್ತವಾಗುತ್ತದೆ. ಹೀಗೆ ಪ್ಲಾಸ್ಟಿಕ್ ಬಳಕೆಯಿಂದ ಭೂ ಮಾಲಿನ್ಯ ಉಂಟಾಗುತ್ತದೆ. 

ಜಲಪ್ರವಾಹದಿಂದ ಹಲವಾರು ಹಾನಿಗಳು ಉಂಟಾಗುತ್ತವೆ. ಸೇತುವೆಗಳು, ಕಾರು, ಕಟ್ಟಡಗಳು, ಒಳಚರಂಡಿ ವ್ಯವಸ್ಥೆ, ರಸ್ತೆ ಮಾರ್ಗಗಳು ಹೀಗೆ ಹಲವು ರೀತಿಯ ಭೌತಿಕ ವಸುಗಳಿಗೆ ಹಾನಿ ಉಂಟುಮಾಡುತ್ತದೆ. ಇದರಿಂದ ಹಲವು ಸಾಂಕ್ರಾಮಿಕ ರೋಗಗಳು ಮತ್ತು ಜಲಜನ್ಯ ಖಾಯಿಲೆಗಳು ಹರಡಬಹುದು. “ನದಿಗಳು ನಮ್ಮೆಲ್ಲರಿಗೆ ಜೀವವಾಹಿನಿಯಾಗಿದೆ. ಅವು ಕೊಳಕಾದರೆ ಅವು ಬತ್ತಿದರೆ ನಮ್ಮ ಉಸಿರು ಅಡಗುತ್ತಾ ಬಂದಂತೆ.” ಎಂಬ ಮಾತನ್ನು ನಾವು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈಗೀಗ ಮಳೆಗಾಲ ಮುಗಿಯುತ್ತಿದ್ದಂತೆ ನೀರಿಗಾಗಿ ಹಾಹಾಕಾರ ಕಂಡುಬರುವುದು ಈ ಕಾರಣದಿಂದಲೇ ಅನ್ನಬಹುದು. 

ಹೀಗೆಯೇ ಮರಿಸರ ಮಾಲಿನ್ಯ ಮತ್ತು ಜನಸಂಖ್ಯಾ ಸ್ಫೋಟ ಮುಂದುವರಿದರೆ ಈ ಭೂಮಿಯ ಮೇಲೆ ನಾವು ಜೀವನ ನಡೆಸುವುದು ಕಠಿಣವಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಸರಕಾರದ ಯೋಜನೆಗಳು ಅಸ್ತವ್ಯಸ್ಥವಾಗುತ್ತಿವೆ. ಸಶಕ್ತ ದೇಶ ಕಟ್ಟುವ ವಿಚಾರದಲ್ಲಿ ಯುವ ಜನತೆಗೆ ತಮ್ಮ ಪಾತ್ರದ ಬಗ್ಗೆ ಅರಿವು ಇರಬೇಕು. ಕಳೆದ ೩೦ ವರ್ಷಗಳಲ್ಲಿ ನಗರಗಳ ಜನಸಂಖ್ಯೆಯು ಅತಿವೇಗದಿಂದ ಹಿಗ್ಗುತ್ತಿದ್ದು, ಅದರಿಂದ ವಾತಾವರಣದ ಬಗ್ಗೆ ಗಂಭೀರ ಪ್ರಶ್ನೆ ನಿರ್ಮಾಣವಾಗಿದೆ. ನಗರಗಳಲ್ಲಿ ಹೊರಗಡೆಯಿಂದ ಬರುತ್ತಿರುವ ಹೆಚ್ಚಿನ ಗುಂಪುಗಳ ಆವಶ್ಯಕತೆಯನ್ನು ಪೂರೈಸಲು ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಹಾಗೂ ನಿಯಮಗಳನ್ನು ಎಲ್ಲಿಯೂ ಪಾಲಿಸದಿರುವುದರಿಂದ ಕೆಲವೇ ದಿನಗಳಲ್ಲಿ ಈ ಪ್ರಶ್ನೆಯು ಉಗ್ರ ರೂಪ ಧರಿಸಬಹುದು ಎಂಬ ಭಯವನ್ನು ಎಲ್ಲೆಡೆಯ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಜನಸಂಖ್ಯಾ ಸ್ಪೋಟದಿಂದ ಹಳ್ಳಿಗಳಲ್ಲಿ ಇರುವ ಜನ ಅಲ್ಲಿ ಜೀವನ ನಡೆಸಲು ಬೇಕಾದಷ್ಟು ಆದಾಯ ದೊರಕದೇ ನಗರಗಳತ್ತ ವಲಸೆ ಬರುತ್ತಾರೆ. ಇದರಿಂದ ಹಳ್ಳಿಗಳು ಅತಿ ವೇಗದಿಂದ ನಗರಗಳಾಗಿ ರೂಪಾಂತರವಾಗುತ್ತಿರುವುದರಿಂದ ಅವರೆಲ್ಲರಿಗೆ ಬದುಕಲು ಸೂರು, ದುಡಿಯಲು ಕೆಲಸ ಒದಗಿಸ ಬೇಕಾದ ಅನಿವಾರ್‍ಯತೆಯಿಂದ ಪ್ರಗತಿ ಮತ್ತು ಅನುಕೂಲತೆಯ ಹೆಸರಿನಲ್ಲಿ ಹಸಿರು ಕಡಿಮೆಯಾಗುತ್ತಿದೆ ಹಾಗೂ ಎಲ್ಲೆಡೆ ಕಾಂಕ್ರೀಟಿನ ಅರಣ್ಯವೇ ಬೆಳೆಯುತ್ತಿವೆ. ನಗರಗಳಲ್ಲಿ ಓಡಾಡುವ ಜನರಿಗನುಗುಣವಾಗಿ ಸಾರಿಗೆ ಸಂಪರ್ಕವನ್ನೂ ಒದಗಿಸ ಬೇಕಾಗುತ್ತದೆ. ಬಹಳಷ್ಟು ಜನ ತಮ್ಮ ಸ್ವಂತ ವಾಹನಗಳನ್ನೂ ಹೊಂದಿರುತ್ತಾರೆ ಈ ವಾಹನಗಳಿಂದ , ಕಾರ್ಖಾನೆಗಳಿಂದ ಹೊರಸೂಸುವ ವಿಷಯಯುಕ್ತ ಗಾಳಿಯಿಂದಲೂ ಪರಿಸರ ಹಾಳಾಗುತ್ತದೆ. ಅಲ್ಲದೇ ನಗರಗಳಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳು ಮತ್ತು ಹೊಲಗದ್ದೆಗಳಲ್ಲಿ ಸಿಗುವ ವಿಷವಿಲ್ಲದ ಹಾವು, ಕಪ್ಪೆ ಇವುಗಳ ಪ್ರಮಾಣವು ಕಡಿಮೆಯಾಗುತ್ತಿದೆ. ಇತಿಹಾಸದಲ್ಲಿ “ಪ್ರಪಂಚದ ಅಗಾಧ ಪಕ್ಷಿ ಸಂಕುಲವನ್ನು ಗಮನಿಸಿದಾಗ ನಾನು ಎಷ್ಟೇ ಹಕ್ಕಿಗಳನ್ನು ನೋಡಿದ್ದರೂ ಇತಿಹಾಸದ ಮುಂದೆ ಅದು ಸಾಸಿವೆ ಕಾಳಿಗೆ ಸಮನಾಗುತ್ತದೆ.”ಎಂಬ ಮಾತಿತ್ತು. ಆದರೆ ಅರಣ್ಯಗಳು ನಶಿಸಿ ಹೋಗುತ್ತಿರುವುದರಿಂದ ಚಳಿಗಾಲದ ವಿಶೇಷ ಅತಿಥಿಗಳಾದ ಪಕ್ಷಿಗಳು ಇಂದು ಕಾಣದಂತಾಗಿವೆ. ರಭಸದಿಂದ ಸಾಗುತ್ತಿರುವ ಮರಳು ಸಾಗಾಣಿಕೆಯಿಂದ ನದಿಗಳ ಅವಸ್ಥೆಯು ದಯನೀಯವಾಗಿದೆ. ಮನುಷ್ಯನಿಗೆ ಸರಳ ಜೀವನ ನಡೆಸಲು ಪ್ರಕೃತಿಯಿಂದ ಸಕಲ ಸೌಲಭ್ಯಗಳು ಲಭಿಸಿವೆ. ಆದರೆ ಜನಸಂಖ್ಯೆಸ್ಫೋಟ ಮತ್ತು ಅತಿಯಾದ ಆಸೆಯಿಂದ ವಾತಾವರಣದ ಮೇಲೆ ಒತ್ತಡ ಬೀರುತ್ತಿದೆ. ಈ ಒತ್ತಡವನ್ನು ಕಡಿಮೆ ಮಾಡಲು ನಮ್ಮಿಂದ ಆಗುವ ಪ್ರಯತ್ನಗಳನ್ನು ನಾವು ಮಾಡಬೇಕಲ್ಲವೇ! ನನಗೆ ಪರಿಸರ ಎಂದಾಕ್ಷಣ ಈ ಮಾತು ನೆನಪಿಗೆ ಬರುತ್ತದೆ. ಏಕೆಂದರೆ ಈ ಮಾತನ್ನು ಹಲವಾರು ಜನರು ಹೇಳಿದ್ದನ್ನು ನಾನು ಆಗಾಗ ಕೇಳುತ್ತಿರುತ್ತೇನೆ. ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು.”

೧೯೭೩ ರಿಂದ ವಿಶ್ವ ಪರಿಸರ-ದಿನಾಚರಣೆ ಜಾರಿಗೆ ಬಂತು. ಈ ದಿನಾಚರಣೆಯ ಉದ್ಧೇಶ ಜನರಲ್ಲಿ ಪರಿಸರ ಬಗ್ಗೆ ಕಾಳಜಿಯನ್ನುಂಟು ಮಾಡುವದು ಮತ್ತು ಪರಿಸರ ರಕ್ಷಣೆಯ ಅವಶ್ಯಕತೆಯ ಬಗ್ಗೆ ಪ್ರಚಾರ ಹಮ್ಮಿಕೊಳ್ಳುವದು. Uಓ‌ಇP ಸಂಸ್ಥೆಯು ಪ್ರತಿವರ್ಷ ಒಂದೊಂದು ದೇಶದಲ್ಲಿ, ಒಂದು ಪರಿಸರದ ವಿಷಯವನ್ನು, ಮೂಲವಾಗಿಸಿ ಆಚರಣೆಯನ್ನು ಹಮ್ಮಿಕೊಳ್ಳುತ್ತದೆ. ಮತ್ತು ಈ ವಿಷಯವನ್ನು ಪ್ರಪಂಚದಾದ್ಯಂತ ಪ್ರಚುರಪಡಿಸಿ ಜನಜಾಗೃತಿ ಮೂಡಿಸಲಾಗುತ್ತದೆ. ಈ ವರ್ಷದ ವಿಷಯ "ಃioಜiveಡಿsiಣಥಿ ಅಂದರೆ ‘ಜೀವವೈವಿಧ್ಯೆ ಎಂಬುವುದಾಗಿದೆ. 

ಪ್ರತಿವರ್ಷ ಪರಿಸರ ದಿನಾಚರಣೆಯನ್ನು ಆಚರಿಸುವುದು, ಗಿಡ, ಸಸಿಗಳನ್ನು ನೆಟ್ಟು ಸುಮ್ಮನಾದರೆ ಸಾಲದು. ಪರಿಸರ ರಕ್ಷಣೆಯ ಜವಾಬ್ದಾರಿಯನ್ನೂ ಪ್ರತಿಯೊಬ್ಬ ನಾಗರಿಕನ ಮೇಲೆ ಹೊರಿಸ ಬೇಕು. ಈ ಬಗ್ಗೆ ಸರಕಾರಗಳು ಕಠಿಣವಾದ ಕಾಯಿದೆಗಳನ್ನು ರೂಪಿಸಬೇಕು. ಸಾವಿರಾರು ವರ್ಷಗಳ ಹಿಂದೆ ವಿಷ್ಣುಗುಪ್ತರಿಂದ ರಚಿತವಾದ ಚಾಣಕ್ಯ ಅರ್ಥಶಾಸ್ತ್ರವೆಂಬ ಗ್ರಂಥದಲ್ಲಿ ಒಂದು ನಗರದ ಸ್ವಚ್ಚತೆ ಸರ್ವ ನಾಗರೀಕರ ಕರ್ತವ್ಯ ಎಂದು ಹೇಳಲಾಗಿದೆ. ಅಲ್ಲದೆ ರಸ್ತೆಯ ಮೇಲೆ ಸಿಕ್ಕಸಿಕ್ಕಲ್ಲಿ ಕಸ ಒಗೆದವರಿಗೆ ೩ ಕಾಸು ದಂಡ ಹಾಕಬೇಕು, ಮತ್ತು ಅವರಿಂದಲೇ ಆ ಕಸವನ್ನು ತೆಗೆಸ ಬೇಕು, ಹೊರಗಿನ ಪರಿಸರದಲ್ಲಿ ಮಲ-ಮೂತ್ರ ವಿಸರ್ಜಿಸಿದವರಿಗೆ ಒಂದು ಪವನ ದಂಡ ಹಾಕಬೇಕು, ಸತ್ತ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ ಇತ್ಯಾದಿಗಳನ್ನು ರಸ್ತೆಯ ಮೇಲೆ ಹಾಕಿದವರಿಗೆ ೩ ಪವನ ದಂಡ ವಿಧಿಸಬೇಕು ಅದೇ ರೀತಿ ಕತ್ತೆ, ಕುದುರೆಗಳ ಶವಗಳನ್ನು ರಸ್ತೆಯ ಮೇಲೆ ಒಗೆದರೆ ೬ ಪವನ ದಂಡ ಹಾಕಬೇಕು ಎಂದಿದೆ. ಇಂತಹ ಕಾಯಿದೆಗಳನ್ನು ಇಂದೂ ಸಹ ಜಾರಿಗೆ ತರಬೇಕಾಗಿದೆ. ನಾವು ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಗಿಡ-ಮರಗಳನ್ನು ನೆಟ್ಟು ಬೆಳೆಸುವ ಪ್ರತಿಜ್ಞೆ ಮಾಡಬೇಕಾಗಿದೆ. ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳಲು ಮುನ್ನುಡಿಯಾಗಿ ನಮ್ಮ ಮನೆ ಸುತ್ತ ಮುತ್ತಲಿನ ಪರಿಸರವನ್ನು ಕಸ-ಕಡ್ಡಿಗಳಿಂದ ಮುಕ್ತಗೊಳಿಸ ಬೇಕು. ಶಬ್ಧ ಮಾಲಿನ್ಯ, ಜಲ ಮಾಲಿನ್ಯ, ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು ಪರಿಸರ ಸ್ನೇಹಿ ಜೀವನ ಕ್ರಮ ಅಳವಡಿಸಿಕೊಂಡು ನಮ್ಮಿಂದಾದ ಪ್ರಯತ್ನವನ್ನು ಮಾಡ ಬೇಕಾಗಿದೆ. ಧರ್ಮ, ಜಾತಿ ಎಂದು ಬೇಧ-ಭಾವ ತೋರದೆ ಈ ದೇಶದ ಎಲ್ಲರೂ ಕಡ್ಡಾಯವಾಗಿ ಕುಟುಂಬ ನಿಯಂತ್ರಣವನ್ನು ಅಳವಡಿಸಿ ಕೊಳ್ಳುವಂತೆ ಕಾನೂನು ತರಬೇಕು. ಅದಕ್ಕೆ ಮೀರಿ ನಡೆಯುವವರಿಗೆ ದಂಡ ವಿಧಿಸುವುದರೊಂದಿಗೆ ಯಾವುದೇ ಸೌಲಭ್ಯಗಳನ್ನು ನೀಡಲೇ ಬಾರದು. ಸರಕಾರಿ ನೌಕರಿಗಳಲ್ಲಿಯೂ ಅವರನ್ನು ಪರಿಗಣಿಸ ಬಾರದು. ಯಾವುದೇ ರೀತಿಯ ಕನಿಕರ, ಮರುಕ ತೋರದೆ ದೇಶದ ಜನರೆಲ್ಲರೂ ಒಂದೇ, ಜನಸಂಖ್ಯಾ ಸ್ಫೋಟದಿಂದ ಈ ದೇಶವನ್ನು ರಕ್ಷಿಸಿ ಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿ ಅನ್ನುವುದನ್ನು ಒತ್ತಾಯ ಪೂರ್ವಕವಾಗಿಯಾದರೂ ಜನರಿಗೆ ಅರಿವಾಗುವಂತೆ ಮಾಡಬೇಕು.  ಸ್ವಚ್ಛ ಮನಸ್ಸು ಸ್ವಚ್ಚ ಮನೆಗೆ ಕಾರಣವಾದರೆ, ನಿಯಂತ್ರಿತ ಕುಟುಂಬ ಸಂತೋಷ ಮತ್ತು ಸ್ವಾಭಿಮಾನಕ್ಕೆ ಕಾರಣವಾಗುತ್ತದೆ. ಇದರಿಂದ ಜನರಿಗೂ ಲಾಭವಿದೆ, ದೇಶಕ್ಕೂ ಲಾಭವಿದೆ. 

2 likes

Published By

Deepak Shenoy

deepakshenoy

Comments

Appreciate the author by telling what you feel about the post 💓

Please Login or Create a free account to comment.