ಸಹವಾಸದಂತೆ ಸ್ವಭಾವ

ಸಹವಾಸದಿಂದ ಸ್ವಭಾವವೂ ಬದಲಾಗುತ್ತದೆ.

Originally published in kn
Reactions 0
530
ARAVIND SHANBHAG, Baleri
ARAVIND SHANBHAG, Baleri 03 Sep, 2020 | 0 mins read
Subhashita Sanskrit Sajjana sahavasa

ಯೇ ಸುಗಂಧಿನಿ ಸೇವಂತೇ

ತಥಾ ಗಂಧಾ ಭವಂತಿ ತೇ |

ಯೇ ದುರ್ಗಂಧಿನಿ ಸೇವಂತೇ

ತಥಾ ಗಂಧಾ ಭವಂತಿ ತೇ ||


ಗಂಧಯುಕ್ತ ಹೂಗಳಿರುವ ತೋಟದಲ್ಲಿ ಕೆಲಸ ಮಾಡುವವರ ಮತ್ತು ಸುಗಂಧ ದ್ರವ್ಯ ತಯಾರಿಸುವ ಸ್ಥಳದಲ್ಲಿರುವವರ ದೇಹವು ಸುಗಂಧಯುಕ್ತವಾಗಿರುತ್ತದೆ. ಕೊಚ್ಚೆ, ರಾಡಿಯಿರುವ ಚರಂಡಿಯ ಕೆಲಸ ಮಾಡುವವರ ದೇಹವು ದುರ್ಗಂಧ ಸೂಸುತ್ತದೆ.

ಉದಾಹರಣೆ ತೆಗೆದುಕೊಂಡರೆ, ಗೊಬ್ಬರದ ಉತ್ಪನ್ನದಲ್ಲಿ ಕೆಲಸಮಾಡುವವನ ದೇಹ ಗೊಬ್ಬರದ ವಾಸನೆಯಿಂದ, ಮೀನು ಮಾರುವವನ ದೇಹ ಮೀನಿನ ವಾಸನೆಯಿಂದ ಕೂಡಿರುತ್ತದೆ.

ಇದೇ ರೀತಿ ಜೀವನದಲ್ಲಿ ಪ್ರಗತಿ, ಉನ್ನತಿ ಮತ್ತು ಉತ್ತಮ ಸ್ಥಾನಮಾನ ಬಯಸುವವರು ಸಜ್ಜನರ ಸಂಗ ಮಾಡಬೇಕು.

ಸಜ್ಜನರ ಸಂಗದಿಂದ ಸದ್ಗುಣಗಳು, ದುರ್ಜನರ ಸಂಗದಿಂದ ದುರ್ಗುಣಗಳು ಬರುತ್ತವೆ.

ಹೆಂಡ ಮಾರುವವನ ಬಳಿ ಹಾಲು ಇದ್ದರೆ ಜನ ಅದನ್ನು ಹೆಂಡವೆಂದು ಮತ್ತು ಹಾಲು ಮಾರುವವನ ಬಳಿ ಹೆಂಡವಿದ್ದರೆ ಜನ ಅದನ್ನು ಹಾಲೆಂದೇ ಭಾವಿಸುತ್ತಾರೆ.

ಸಹವಾಸದಿಂದ ಸ್ವಭಾವವೂ ಬದಲಾಗುತ್ತದೆಯೆನ್ನುವದನ್ನು ಈಗಲಾದರೂ ನಂಬುತ್ತೀರಾ?

0 likes

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

Please Login or Create a free account to comment.