ಮಾತೃಭೂಮಿ ಭಾರತ

ಭೂಲೋಕದ ಸ್ವರ್ಗ ಮಾತೃಭೂಮಿಯ ಗರ್ಭ ಜಂಬೂದ್ವೀಪ ಭರತಖಂಡ ಭರತವರ್ಷ ಭಾರತ

Originally published in kn
❤️ 1
💬 0
👁 872
ARAVIND SHANBHAG, Baleri
ARAVIND SHANBHAG, Baleri 15 Aug, 2020 | 1 min read

ಭೂಲೋಕದ ಸ್ವರ್ಗ 

ಮಾತೃಭೂಮಿಯ ಗರ್ಭ

ಜಂಬೂದ್ವೀಪ ಭರತಖಂಡ 

ಭರತವರ್ಷ ಭಾರತ 


ಗಂಗಾ ಯಮುನಾ ಬ್ರಹ್ಮಪುತ್ರ 

ಪರಮ ಪಾವನ ತೀರ್ಥ 

ಅಗಸ್ತ್ಯ ಅತ್ರಿ ವಿಶ್ವಾಮಿತ್ರ 

ಬ್ರಹ್ಮರ್ಷಿಗಳ ಆರ್ಯಾವರ್ತ 


ಶ್ರೀಶೈಲ ಕೇದಾರ ರಾಮೇಶ್ವರ 

ಜ್ಯೋತಿರ್ಲಿಂಗದ ತಾಣ 

ಬಸವ ಕಾಳಿದಾಸ ಜ್ಞಾನೇಶ್ವರ 

ವಿಶ್ವಸಾಹಿತ್ಯದ ತ್ರಾಣ 


ಶ್ರೀರಾಮ ಹರೇ ಕೃಷ್ಣ ನಮಃ ಶಿವಾಯ 

ಕಣಕಣದಲ್ಲೂ ಭಕ್ತಿಯ ವಾಗ್ಮಯ 

ಬುದ್ಧ ನಾನಕ್ ಮಹಾವೀರ 

ಮಾಡಿಹರು ಧರ್ಮದ ಪ್ರಸಾರ 


ತ್ರಿಪುರ ಅರುಣ ಹಿಮಾಚಲ 

ವನರಾಜಿ ಇಲ್ಲಿ ಅಚಲ 

ಸಹ್ಯ ವಿಂಧ್ಯ ಹಿಮಾಲಯ 

ಸಾಧು ಸಂತರ ಆಲಯ 


ಕಾಶಿ ಕಂಚಿ ಅಯೋಧ್ಯಾ 

ಮೋಕ್ಷದಾಯಿ ನಗರ 

ಅರಬ್ಬೀ ಬಂಗಾಳ ಹಿಂದೂ 

ಮೂರುಕಡೆ ಮಹಾಸಾಗರ 


ಸಂಸ್ಕ್ರತ ಹಿಂದಿ ಮಲಯಾಳಂ 

ವಿಭಿನ್ನ ಭಾಷಾ ಸಂಗಮ 

ಜ್ಞಾನದ ಗಣಿ ಸೌಂದರ್ಯದ ಖಣಿ 

ಶ್ಯಮಂತಕ ಮಣಿ ದಿವ್ಯ ಸಂಜೀವಿನಿ 


ಭೂಲೋಕದ ಸ್ವರ್ಗ 

ಮಾತೃಭೂಮಿಯ ಗರ್ಭ

ಜಂಬೂದ್ವೀಪ ಭರತಖಂಡ 

ಭರತವರ್ಷ ಭಾರತ 


ಅರವಿಂದ ಶ್ಯಾನಭಾಗ, ಬಾಳೇರಿ 

1 likes

Support ARAVIND SHANBHAG, Baleri

Please login to support the author.

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

Please Login or Create a free account to comment.