ಸುಧಾರಸ

ಸುಭಾಷಿತ ಮೌಲ್ಯ

Originally published in kn
Reactions 3
434
ARAVIND SHANBHAG, Baleri
ARAVIND SHANBHAG, Baleri 12 Aug, 2020 | 1 min read

ಸಾಧೂನಾಂ ದರ್ಶನಂ ಪುಣ್ಯಂ

ತೀರ್ಥಭೂತಾ ಹಿ ಸಾಧವಃ।

ತೀರ್ಥಂ ಫಲತಿ ಕಾಲೇನ 

ಸದ್ಯಃ ಸಾಧು ಸಮಾಗಮಃ।

 

ತಾತ್ಪರ್ಯ:

 

ಸಾಧುಜನರ ದರ್ಶನವು ಪುಣ್ಯಕರವಂತೆ, ಅವರು ತೀರ್ಥಕ್ಷೇತ್ರವಿದ್ದಂತೆ ಎನ್ನುವ ಮಾತು ಸಂಸ್ಕೃತ ಸುಭಾಷಿತದಲ್ಲಿದೆ. ತೀರ್ಥಕ್ಷೇತ್ರವು ಕಾಲಾಂತರದಲ್ಲಿ ಫಲವನ್ನು ಕೊಡುತ್ತದೆ. ಸಾಧುಸಮಾಗಮವು ಕೂಡಲೇ ಒಳ್ಳೆಯ ಫಲವನ್ನು ಕೊಡುತ್ತದೆ.

 

ಅಂದರೆ ತೀರ್ಥಕ್ಷೇತ್ರಗಳು ನಮ್ಮ ಸಂಸ್ಕೃತಿಯಲ್ಲಿ ತುಂಬ ಮಹತ್ವವನ್ನು ಪಡೆದಿದ್ದು ನಮ್ಮ ಪಾಪವನ್ನು ಹೋಗಲಾಡಿಸುತ್ತವೆ; ಅಲ್ಲದೆ, ನಮಗೆ ಪುಣ್ಯವನ್ನೂ ತಂದುಕೊಡುತ್ತವೆಯೆನ್ನುವ ವಿಶ್ವಾಸ ನಮ್ಮದು. ತೀರ್ಥ ಎನ್ನುವುದಕ್ಕೆ ಹಲವು ಅರ್ಥಗಳುಂಟು: ಉ‍ಪಾಧ್ಯಾಯ, ಗುರು, ಜನಕ, ಆಚಾರ್ಯ, ನೀರು, ಅಗ್ನಿ, ಯೋಗ – ಹೀಗೆ. ನಮ್ಮ ಜೀವನವನ್ನು ಉದ್ಧರಿಸಬಲ್ಲ ವಿವರಗಳನ್ನು ‘ತೀರ್ಥ’ ಎಂದು ಪರಂಪರೆ ಗುರುತಿಸಿರುವುದು ಸ್ಪಷ್ಟ. ಅದಕ್ಕೆ ಹಿರಿಯರು ಅಪ್ಪನನ್ನು ತೀರ್ಥರೂಪ ಎಂದು ಸಂಬೋಧಿಸುತ್ತಿದ್ದರು.

 

ಸಜ್ಜನರ ದರ್ಶನವನ್ನೇ ತೀರ್ಥಕ್ಷೇತ್ರದೊಂದಿಗೆ ಸುಭಾಷಿತ ಸಮೀಕರಿಸಿದೆ. ನಾವು ಕ್ಷೇತ್ರದ ಯಾತ್ರೆಗಾಗಿ ಸಾಕಷ್ಟು ಶ್ರಮವನ್ನು ಪಡಬೇಕು. ಆದರೆ ಸಜ್ಜನರು ಎಂಬ ಜಂಗಮತೀರ್ಥ ಸಂದರ್ಶನಕ್ಕೆ ಅಂಥ ಕಷ್ಟಗಳನ್ನು ಪಡಬೇಕಾಗಿಲ್ಲ; ನಾವು ಅವರನ್ನು ನೋಡಬೇಕೆಂಬ ಸಂಕಲ್ಪಮಾಡಬೇಕಷ್ಟೆ. ಕ್ಷೇತ್ರದ ಸ

ದರ್ಶನದಿಂದ ಪುಣ್ಯ ಕಾಲಾಂತರದಲ್ಲಿ ಸಿಗುವಂಥದ್ದು. ಸಜ್ಜನರ, ಸಾಧುಪುರುಷರ ಸಂದರ್ಶನದ ಫಲ ಈ ಕೂಡಲೇ ಸಿಗುವಂಥದ್ದು. 

# ಅರವಿಂದ ಶ್ಯಾನಭಾಗ

3 likes

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

  • Madhu Kodanad · 3 years ago last edited 3 years ago

    ನಿಜವಾದ ಮಾತು‌‌, ವಿಚಾರ

Please Login or Create a free account to comment.